ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಶ್ರೀ ಬ್ರಹ್ಮ ಆದಿಮೊಗರ್ಕಳ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರ ಸೇವಾ ಸಮಿತಿ ತೃತೀಯ ವರ್ಷದ ನೇಮೋತ್ಸವ ಮಾ.25 ಹಾಗೂ 26 ರಂದು ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸ್ಥಳದ ಗುಳಿಗ ದೈವ ಹಾಗೂ ಶ್ರೀ ಬ್ರಹ್ಮ ಆದಿ ಮೊಗೇರ್ಕಳ ಮತ್ತು ಕಾರಣಿಕದ ಸ್ವಾಮಿ ಕೊರಗಜ್ಜ ದೈವಗಳ ನೇಮೋತ್ಸವ ನಡೆಯಲಿದೆ.
ವೇ.ಮೂ. ಶ್ರೀಧರ ಭಟ್ ಕಬಕ ಅವರ ಪೌರೋಹಿತ್ಯದಲ್ಲಿ ಮಾ.25 ಶನಿವಾರ ಬೆಳಿಗ್ಗೆ 9ಕ್ಕೆ ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30 ಕ್ಕೆ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಗೊನೆ ಮುಹೂರ್ತ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ಕ್ಕೆ ಸ್ಥಳದ ಗುಳಿಗ ದೈವದ ನೇಮೋತ್ಸವ, ರಾತ್ರಿ 8.30 ಕ್ಕೆ ಮೊಗೇರ್ಕಳ ದೈವದ ಭಂಡಾರ ತೆಗೆಯುವುದು, 9 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ, 9.30 ಕ್ಕೆ ಮೊಗೇರ್ಕಳ ಗರಡಿ ಇಳಿಯುವುದು. 11.30 ಕ್ಕೆ ತನ್ನಿಮಾಣಿಗ ಗರಡಿ ಇಳಿಯುವುದು.
ಮಾ.26 ಭಾನುವಾರ ಬೆಳಿಗ್ಗೆ 6.00 ಕ್ಕೆ ಮುಗೇರುಗಳು ಹಾಲು ಕುಡಿಯುವುದು, 6.30 ಕ್ಕೆ ಕಾರಣಿಕದ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.