ಪುತ್ತೂರು: ಶಾಂತಿಗೋಡು, ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಸಡಕ್ ಯೋಜನೆಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನಡೆಯಿತು.
ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಅಭಿವೃದ್ಧಿ ಕಾರ್ಯದಿಂದ ಊರಿನ ಚಿತ್ರಣ ಬದಲಾಗಿದೆ : ಮೀನಾಕ್ಷಿ ಶಾಂತಿಗೋಡು
ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ನನ್ನ ಜಿಲ್ಲಾ ಪಂಚಾಯಿತಿ ಅವಧಿ ಆಗಿರಬಹುದು, ಶಾಸಕರ ಐದು ವರ್ಷದ ಅವಧಿ ಆಗಿರಬಹುದು. ಹಲವು ಕೋಟಿ ಅನುದಾನ ಶಾಂತಿಗೋಡಿಗೆ ಬಂದಿದ್ದು, ಏತ ನೀರಾವರಿ, ಸುಸಜ್ಜಿತ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ನಡೆದು ಊರಿನ ಚಿತ್ರಣವನ್ನೇ ಬದಲಾಗುವಂತೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧಾಕರ್ ಕುಲಾಲ್, ಕೃಷಿಕ ನಾರಾಯಣ ಗೌಡ ಪಾದೆ, ಸಡಕ್ ಯೋಜನೆಯ ಸಹಾಯಕ ಇಂಜಿನಿಯರ್ ಪದ್ಮರಾಜ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ಸತೀಶ್ ಬಪ್ಪಳಿಗೆ, ಅರ್ಚಕ ಬಾಲಚಂದ್ರ ಸಗ್ರಿತ್ತಾಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಾಡಿ, ಗ್ರಾಪಂ ಸದಸ್ಯರಾದ ವಸಂತಿ, ದಿನೇಶ್ ಮಜಲು, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಮ್ ಪ್ರಸಾದ್, ಬಿಜೆಪಿ ಬೂತ್ ಸಮತಿ ಅಧ್ಯಕ್ಷ ಕೃಷ್ಣ ಸಾಲಿಯಾನ್, ಉದಯಶಂಕರ್ ಭಟ್, ದೇವಪ್ಪ, ಸುಕುಮಾರ ತೋಳ್ಪಾಡಿ, ಯೋಗೀಶ್, ರವಿಶೆಟ್ಟಿ, ರೂಪಲತಾ, ಜಯ, ಬೆಳಿಯಪ್ಪ, ವಿನೋದ್, ಜನಾರ್ದನ, ಅಂಗನವಾಡಿ ಕಾರ್ತಕರ್ತೆ ನಳಿನಿ ಮತ್ತಿತರರು ಉಪಸ್ಥಿತರಿದ್ದರು.
6.36 ಕೋಟಿಯ ಗ್ರಾಮ ಸಡಕ್ ರಸ್ತೆ ಹಾಗೂ 1.50 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆಯನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.