ಪುತ್ತೂರು: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದುಂಬ್ಲಾಡಿಗುತ್ತು ಶ್ರೀ ರುದ್ರಚಾಮುಂಡಿ ಮಲರಾಯ ದೈವಸ್ಥಾನದ ಬ್ರಹ್ಮಕಲಶಾಭಿಷೇಕ ಹಾಗೂ ನೇಮೋತ್ಸವ ಮಾ.24 ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ವೇ. ಮೂ. ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಉತ್ಸವದ ಅಂಗವಾಗಿ ಮಾ.23 ಸೋಮವಾರ ಸಂಜೆ ಗ್ಗೆ 5 ಕ್ಕೆ ತಂತ್ರಿಗಳ ಆಗಮನ, ರಾತ್ರಿ 7 ರಿಂದ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ ನಡೆಯಲಿದೆ.
ಮಾ.24 ಶುಕ್ರವಾರ ಪ್ರಾತಃಕಾಲ 5 ರಿಂದ ಶ್ರೀ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ ಗಂಟೆ 6.56 ರ ಮೀನ ಲಗ್ನದಲ್ಲಿ ಶ್ರೀ ದೈವಗಳಿಗೆ ಬ್ರಹ್ಮಕಲಶಾಭಿಷೇಕ, 8.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಪೂಜೆ, ಶ್ರೀ ದೈವಗಳ ತಂಬಿಲ ಸೇವೆ, ಮಹಾಪೂಜೆ, ಮಧ್ಯಾಹ್ನ 12.30 ಕ್ಕೆ ವನಭೋಜನ ಸಹಿತ ಬ್ರಾಹ್ಮಣ ಸಮಾರಾಧನೆ, ಅನ್ನಸಂತರ್ಪಣೆ ಜರಗಲಿದೆ. ಬೆಳಿಗ್ಗೆ 10 ರಿಂದ ಕೆದಿಲ ಶ್ರೀ ಧೂಮಾವತಿ ಭಜನಾ ಮಂಡಳಿಯವರಿಂದ ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆಯವರ ನೇತೃತ್ವದಲ್ಲಿ ಭಜನಾ ಸೇವೆ ನಡೆಯಲಿರುವುದು. ಸಂಜೆ 4 ರಿಂದ ಗುರುಹಿರಿಯರು, ಮಲರಾಯ, ಜ್ಯಾವತೆ, ವರ್ಣಾರವ ಪಂಜುರ್ಲಿ, ಮನಿಪ್ಪಂದಿ ಪಂಜುರ್ಲಿ, ಸತ್ಯದೇವತೆ, ಪುರುಷರಾಯ ಮತ್ತು ಧರ್ಮದೈವ ಶ್ರೀ ರುದ್ರಚಾಮುಂಡಿ ದೈವಗಳಿಗೆ ನರ್ತನ ಸೇವೆ ನಡೆಯಲಿದೆ.
ಮಾ.25 ಶನಿವಾರ ಸಂಜೆ 6 ಕ್ಕೆ ಶ್ರೀ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.