ಪುತ್ತೂರು: ಭಾರತೀಯ ಅಂಚೆ ಇಲಾಖೆ ಹಾಗೂ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಮಾರ್ಚ್ 21ರಂದು ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಧಾರ್ ಕಾರ್ಡ್ ಪರಿಷ್ಕರಣೆ ಮತ್ತು ಹೊಸ ಆಧಾರ್ ಕಾರ್ಡ್ ನೊಂದಣಿ ಶಿಬಿರ ಉದ್ಘಾಟನೆಗೊಂಡಿತು.
ಶಿಬಿರದಲ್ಲಿ ಆಧಾರ್ ಪರಿಷ್ಕರಣೆ, ಮಕ್ಕಳ ಆಧಾರ್ ಅಪ್’ಡೇಟ್, ಹೊಸ ಆಧಾರ್ ಮತ್ತು ಪುತ್ತೂರು ತಾಲೂಕು ಬದಲು ಕಡಬ ತಾಲೂಕು ಎಂಬ ಬದಲಾವಣೆ ಮಾಡಲು ಅವಕಾಶ ಇದೆ. ಈ ಬದಲಾವಣೆಗೆ ರೇಷನ್ ಕಾರ್ಡ್, ಫೋಟೋ, ಆಧಾರ್ ಕಾರ್ಡ್ ಅಗತ್ಯ. ಹೊಸ ಆಧಾರ್ ಕಾರ್ಡ್’ಗೆ ಮಗುವಿನ ಜನನ ಸರ್ಟಿಫಿಕೇಟ್, ಹೆತ್ತವರ ಆಧಾರ್ ಕಾರ್ಡ್ ಬೇಕು. ಪುತ್ತೂರು ತಾಲೂಕಿನ ಬದಲು ಕಡಬ ತಾಲೂಕು ಎಂಬ ಬದಲಾವಣೆಗೆ ಸರಿಯಾಗಿ ದಾಖಲಾಗಿರುವ ರೇಷನ್ ಕಾರ್ಡ್ ಅಗತ್ಯ. ಇಲ್ಲದೇ ಇದ್ದರೆ ಗ್ರಾ.ಪಂ. ಅಧ್ಯಕ್ಷರ ಸಹಿ ಅಗತ್ಯ.
ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ದರ್ಖಾಸ್ತು ಶಿಬಿರವನ್ನು ಉದ್ಘಾಟಿಸಿದರು.
ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ದೇವಯ್ಯ ಖಂಡಿಗ, ಗ್ರಾಪಂ ಉಪಾಧ್ಯಕ್ಷ ಗಣೇಶ್ ಉದನಡ್ಕ, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಸದಾನಂದ ಮಿಯೊಲ್ಪೆ, ಕಾರ್ಯದರ್ಶಿ ದಮಯಂತಿ ಮುದ್ವ, ಗ್ರಾಪಂ ಸದಸ್ಯರಾದ ಸುಲೋಚನಾ, ತೇಜಸ್ವಿನಿ, ಅಂಚೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಸ್ವಾಗತಿಸಿ, ವಂದಿಸಿದರು.