ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 11,356 ಕೋ.ರೂ. ವಂಚಿಸಿದ ಮೆಹುಲ್ ಚೋಕ್ಸಿಯನ್ನು ಇಂಟರ್‌ಪೋಲ್ ತನ್ನ ರೆಡ್ ಅಲರ್ಟ್ ಪಟ್ಟಿಯಿಂದ ತೆಗೆದುಹಾಕಿದೆ.
ಡಿಸೆಂಬರ್ 2018ರಲ್ಲಿ ಚೋಕ್ಸಿಯನ್ನು ರೆಡ್ ಅಲರ್ಟ್ ಪಟ್ಟಿಗೆ ಸೇರಿಸಲಾಗಿತ್ತು.
ಭಾರತದ ಅಧಿಕಾರಿಗಳು ಇಂಟರ್‌ಪೋಲ್ ಕ್ರಮವನ್ನು ವಿರೋಧಿಸಿದ್ದಾರೆ. ಆದರೆ ಇಂಟರ್‌ಪೋಲ್ ಅಧಿಕಾರಿಗಳು ಅವರ ವಿರೋಧವನ್ನು ಪರಿಗಣಿಸಿಲ್ಲ. ಈ ಮೂಲಕ ಚೋಕ್ಸಿ ಗಡಿಪಾರಿಗೆ ಕಾಯುತ್ತಿದ್ದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಹಿನ್ನಡೆಯಾಗಿದೆ. ಆದರೆ ಆಂಟಿಗುವಾದಿಂದ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗೆ ಇಂಟರ್‌ಪೋಲ್ ಕ್ರಮ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೋಕ್ಸಿ ಪ್ರಸ್ತುತ ಕೆರಿಬಿಯನ್ ದ್ವೀಪ ರಾಷ್ಟ್ರದಲ್ಲಿದ್ದಾರೆ ಮತ್ತು ಭಾರತೀಯ ಅಧಿಕಾರಿಗಳು ಆತನನ್ನು ಹಸ್ತಾಂತರಿಸುವಂತೆ ಆಂಟಿಗುವಾದ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.