ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಝಾನ್ ಕೂಗಿರುವುದಕ್ಕೆ ತೀವ್ರ ಆಕ್ರೋಶ
ಬೆಂಗಳೂರು : ಶಿವಮೊಗ್ಗದಲ್ಲಿ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಝಾನ್ ಕೂಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಜಿನ್ನಾ ಮಾನಸಿಕತೆ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ಸಿದ್ಧ. ಬಿನ್ ಲಾಡೆನ್ ರೀತ ಗುರುತಿಸಿಕೊಂಡರೆ ನಾವು ರೆಡಿ ಇಟ್ಟುಕೊಂಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ತಯಾರಾಗಿದ್ದೇವೆ. ಬೆಂಕಿ ಹಾಕಲು ಬಂದರೆ ಯೋಗಿ ಆದಿತ್ಯನಾಥ್ ರೀತಿ ಕರ್ನಾಟಕದಲ್ಲಿ ಬುಲ್ಡೋಜರ್ ಚಾಲು ಮಾಡುತ್ತೇವೆ. ನೀವು ಒಸಾಮಾ ಬಿನ್ ಲಾಡೆನ್ ಆಗಿ ಬಂದರೆ ಮಟಾಷ್ ಆಗೋದು ಗ್ಯಾರಂಟಿ ಎಂದು ಎಚ್ಚರಿಸಿದ್ದಾರೆ.
ಜಿನ್ನಾನ ಮನಸ್ಥಿತಿ ಇಟ್ಟುಕೊಂಡು ಸಂಚು ಮಾಡಿದರೆ, ಒಪ್ಪಂದಕ್ಕೆ ಸಹಿ ಹಾಕಲು ಕಾಂಗ್ರೆಸ್ ಮತ್ತು ನೆಹರು ಈಗ ಇಲ್ಲ. ಇವತ್ತು ಇರೋದು ಬಿಜೆಪಿ, ಕೇಂದ್ರದಲ್ಲಿ ಮೋದಿ ಇದ್ದಾರೆ. ಹೀಗಾಗಿ ನೀವು ಎಚ್ಚರಿಕೆಯಿಂದ ಯೋಚನೆ ಮಾಡಿ ಎಂದು ಹಿಂದೂ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾಲ ಎಲ್ಲವನ್ನೂ ನಿರ್ಣಯ ಮಾಡುತ್ತೆ, ಸ್ಪಷ್ಟವಾಗಿ ಹೇಳಿದ್ದೇನೆ, ಹೊಸ ಮಸೀದಿ ಕಟ್ಟಿ, ನಾವು ಖುಷಿ ಪಡುತ್ತೇವೆ. ದೇವಾಲಯ ಒಡೆದು ಮಸೀದಿ ಕಟ್ಟಿ ನಮಾಜ್ ಮಾಡಿದರೆ ಒಳ್ಳೆಯದು ಆಗಲು ಸಾಧ್ಯವಿಲ್ಲ.
ನಾವು ಮುಸ್ಲಿಂ ವಿರೋಧಿಗಳಲ್ಲ, ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ. ಬಾಂಬ್ ಇಡುವ ಜನ ನಮಗೆ ಬೇಡ. ಸಂತ ಶಿಶುನಾಳ ಷರೀಫರ ರೀತಿಯ ಜನ ಬಂದರೆ ಬಾರಪ್ಪ ಅಂತ ಪೂಜೆ ಮಾಡುತ್ತೇವೆ. ಕುಕ್ಕರ್ ಬಾಂಬ್ ಹಾಕೋರು, ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಅಂತಹವರು ಕೆ.ಜಿ. ಹಳ್ಳಿ ಡಿ.ಜೆ. ಹಳ್ಳಿ ಗಲಾಟೆ ಮಾಡಿದವರು ಡಿ.ಕೆ. ಬ್ರದರ್ಸ್. ನೀವು ಇಬ್ರಾಹಿಂ ಸುತಾರ, ಶಿಶುನಾಳ ಷರೀಫ, ಅಬ್ದುಲ್ ಕಲಾಂ, ಅಬ್ದುಲ್ ಹಮೀದ್ ಆಗಿ ಬಂದರೆ ತಲೆ ಮೇಲೆ ಇಟ್ಟುಕೊಂಡು ಮೆರೆಸುತ್ತೇವೆ ಎಂದು ಹೇಳಿದ್ದಾರೆ.