ಪುತ್ತೂರು : ಆದಿ ದ್ರಾವಿಡ ಸಮಾಜ ಒಂದು ಕಾರ್ಯಕ್ರಮದ ಮೂಲಕ ಅಂಬೇಡ್ಕರ್ ನೆನಪುಗಳನ್ನು ಮೆಲುಕು ಹಾಕುತ್ತಾ ಈ ದೇಶದ ಇತಿಹಾಸ, ಪರಂಪರೆ, ಹಿಂದೂ ಸಂಸ್ಕೃತಿಗೆ ಕೊಟ್ಟ ಕೊಡುಗೆಗಳ ಆಧಾರದಲ್ಲಿ ಸಮಾಜಕ್ಕೆ ಸರಕಾರ ಹಲವು ಸವಲತ್ತು ಕೊಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹಾ ಕ್ರೀಡೆಗಳನ್ನು ಆಯೋಜಿಸಿ ಮನೋರಂಜನೆ ಕೊಡುವ ಕೆಲಸ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಯುವಕರು ಸಾಧಕರಾಗಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಕೊಟ್ಟಿಗೆ ಪೆರ್ಲ ವಡೆದರ ಆಶ್ರಯದಲ್ಲಿ ಆದಿ ದ್ರಾವಿಡ ಸಮಾಜ ಬಾಂಧವರಿಗಾಗಿ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಶ್ಯಾಮ್ ಸುಂದರ ರೈ ಅನ್ನು ಕಲಾಯಿ ಶುಭ ಹಾರೈಸಿದರು. ಗ್ರಾಪಂ ಸದಸ್ಯೆ ಅಕ್ಕಮ್ಮ, ಶಿವರಾಮ ಭಟ್ ಬಿರ್ನಕಜೆ, ವೈದ್ಯಾಧಿಕಾರಿ ಡಾ.ಅಮಿತ್, ಮುರಳೀಧರ ಕೇಮಾರ, ಸತೀಶ್ ಪಾಂಬಾರು, ಯತೀಂದ್ರ ಕೊಚ್ಚಿ, ತೀರ್ಥಾನಂದ ದುಗ್ಗಳ, ಜಿ.ಕೆ.ಉದಯ ಕುಮಾರ್, ಎಸ್ ಡಿಎಂಸಿ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ರಾಮ ಬಿ.ಪಂಬಾರ್ ಉಪಸ್ಥಿತರಿದ್ದರು.
ಕ್ರೀಡಾಕೂಟದ ಅಂಗವಾಗಿ ಪುರುಷರಿಗೆ ಕಬಡ್ಡಿ ಮತ್ತು ಕ್ರಿಕೆಟ್, ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ತ್ರೋಪಾಲ್ ಪಂದ್ಯಾಟ ನಡೆಯಿತು.