ಪುತ್ತೂರು: ಕಾಲಮಿತಿಯೊಳಗಡೆ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಮುಕ್ತಾಯಗೊಳಿಸುತ್ತಿದ್ದು, ಮಾರ್ಚ್ ೨೬ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಶನಿವಾರ ರೈಲ್ವೇ ಅಂಡರ್ ಪಾಸ್ ಕಾಮಗಾರಿಯನ್ನು ಪರಿಶೀಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಉಪಸ್ಥಿತಿಯಲ್ಲಿ ರೈಲ್ವೇ ಅಂಡರ್ ಪಾಸ್ ಉದ್ಘಾಟನೆಗೊಳ್ಳಲಿದೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ನಿಗದಿತ ಕಾಲಮಿತಿಯೊಳಗಡೆ ಅಂಡರ್ ಪಾಸ್ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಬಹಳ ಬೇಡಿಕೆಯ ಈ ಯೋಜನೆಯ ಕಾಮಗಾರಿ ಇದೀಗ ಕೊನೆ ಹಂತದಲ್ಲಿದೆ. ಇದೀಗ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದರು.
ರೈಲ್ವೇ ಓವರ್ ಬ್ರಿಡ್ಜಿಗೆ ಶಿಲಾನ್ಯಾಸ:
ವಿವೇಕಾನಂದ ವಿದ್ಯಾವರ್ಧಕ ಸಂಘ ಮುನ್ನಡೆಸುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಯ ಸಂಪರ್ಕಿಸುವ ರಸ್ತೆಯಲ್ಲಿರುವ ಓವರ್ ಬ್ರಿಡ್ಜಿಗೂ ಅದೇ ದಿನ ಶಿಲಾನ್ಯಾಸ ನಡೆಯಲಿದೆ. ಈ ಕಾಮಗಾರಿಗೆ ರೈಲ್ವೇಯ ಪೂರ್ಣ ಅನುದಾನದಿಂದ ಕಾಮಗಾರಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಉಪಸ್ಥಿತರಿದ್ದರು.