ಪುತ್ತೂರು: ಬುಧವಾರ ಒಂದೇ ದಿನ ಪುತ್ತೂರು ವಿಧಾನಸಭಾ ಕ್ಷೇತ್ರದ 21 ಕಡೆಗಳಲ್ಲಿ ಶಿಲಾನ್ಯಾಸ ನೆರವೇರಿಸಿರುವ ಶಾಸಕ ಸಂಜೀವ ಮಠಂದೂರು ಅವರು, ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧೆಡೆಗಳಿಗೆ ತೆರಳಿರುವ ಶಾಸಕರು, ರಸ್ತೆ ಅಭಿವೃದ್ಧಿ, ಅಂಗನವಾಡಿ ಕಟ್ಟಡ ನಿರ್ಮಾಣ, ಕಾಂಕ್ರಿಟೀಕರಣ, ಕುಡಿಯುವ ನೀರಿನ ಯೋಜನೆ, ವಿದ್ಯುತ್ ಯೋಜನೆಗಳು, ಶಾಲೆಗೆ ಇಂಟರ್ ಲಾಕ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕರಾವಳಿ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಯೇ ದೊಡ್ಡ ತಲೆನೋವು. ಅಭಿವೃದ್ಧಿಗೊಂಡಷ್ಟು ಇನ್ನಷ್ಟು ರಸ್ತೆಗಳ ಸಮಸ್ಯೆ ಕಣ್ಣಮುಂದೆ ಧುತ್ತೆಂದು ಎದುರಾಗುತ್ತವೆ. ಇನ್ನೊಂದೆಡೆ, ರಸ್ತೆ ಮೂಲಸೌಕರ್ಯಗಳಲ್ಲಿ ಒಂದು. ರಸ್ತೆ ಅಭಿವೃದ್ಧಿಗೊಂಡರೆ ಮಾತ್ರ ಆ ಪ್ರದೇಶ ಎಲ್ಲಾ ರೀತಿಯ ಅಭಿವೃದ್ಧಿಗಳಿಗೆ ತೆರೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಇತರ ಅಭಿವೃದ್ಧಿ ಕಾರ್ಯಗಳ ಜೊತೆಗೆ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಕಾಣಬಹುದು.
ಶಾಸಕರ ಅಭಿವೃದ್ಧಿಯ ಓಟಕ್ಕೆ, ಪ್ರಮುಖರಿಂದ, ಗ್ರಾಮಸ್ಥರಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ಕೆಲವೆಡೆಗಳಲ್ಲಿ ತಮ್ಮ ಪ್ರೀತಿಯನ್ನು ಸನ್ಮಾನದ ಮೂಲಕ ತೋರ್ಪಡಿಸಿದ್ದು ಇದೆ. ಆದರೆ, ಸನ್ಮಾನಕ್ಕೆ ಓಗೊಡದೆ, ಅಭಿವೃದ್ಧಿಯ ಚಿಂತನೆಯಲ್ಲಿ ಸಾಗುತ್ತಿರುವ ಶಾಸಕರು, ಪುತ್ತೂರಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಡಿ. 11ರ 21 ಶಿಲಾನ್ಯಾಸಗಳು:
ನೆಟ್ಟಣಿಗೆ ಮುಡ್ನೂರು ಹಾಗೂ ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ 21 ಕಡೆಗಳಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ವ್ಯಾಪ್ತಿಯ
- ಕುಂಟಾಪು,
- ಸರೋಳಿ,
- ಸಣ್ಣಪಾದೆ,
- ಕರ್ನೂರು,
- ಮಾಪಳ,
- ಪಂಚೋಡಿ,
- ಮೀನಾವು,
- ಮುಂಡ್ಯ,
- ಚಿಮಣಿಗುಡ್ಡೆ
ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗನ್ನೂರು, ಪಡುವನ್ನೂರು ಗ್ರಾಮದ
- ಸಾರಕೂಟೇಲು – ಕೂರ್ಮತ್ತಡ್ಕ,
- ಕುತ್ಯಾಳ – ಕೆಳಂದೂರು,
- ಕುಕ್ಕಾಜೆ – ಅಣಿಲೆ,
- ಮೇಗಿನಮನೆ – ಡೆಂಬಳೆ,
- ಕಾವುಂಜ – ಚೆಕ್ಕಿತ್ತಡಿ,
- ಕೆಳಗಿನ ಕನ್ನಡ್ಕ,
- ಪದಡ್ಕ – ಮೈಕುಳಿ,
- ಕೊಯಿಲ – ಉಳಯ,
- ಪಳಂಬೆ – ಕುಡ್ಚಿಲ,
- ಬಳ್ಳಿಕಾನ – ಮುಂಡಕೊಚ್ಚಿ,
- ಮುಂಡೋಳೆ – ಮೋಡಿಕೆ,
- ತಳಂಜ – ಉಳಯ
3.20 ಕೋಟಿ ರೂ. ಅನುದಾನ
ಡಿ. 11ರಂದು ಶಾಸಕ ಸಂಜೀವ ಮಠಂದೂರು ಅವರು 2 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆರವೇರಿಸಿರುವ ಒಟ್ಟು 21 ಶಿಲಾನ್ಯಾಸ ಕಾಮಗಾರಿಗಳ ಅನುದಾನದ ಒಟ್ಟು ಮೊತ್ತ 3.20 ಕೋಟಿ ರೂ. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1.60 ಕೋಟಿ ರೂ. ಹಾಗೂ ಬಡಗನ್ನೂರು – ಪಡುವನ್ನೂರು ಗ್ರಾಮದಲ್ಲಿ 1.60 ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಿದಂತಾಗಿದೆ.