ಯಕೃತ್ತಿನ ಆರೋಗ್ಯಕ್ಕೆ ಶ್ರೇಷ್ಠ ಎನಿಸಿರುವ ಭೂಮ್ಯಾಮಲಕಿಯ ಬಗ್ಗೆ ತಿಳಿದುಕೊಳ್ಳೋಣ. ಸಂಸ್ಕೃತದಲ್ಲಿ ಇದಕ್ಕೆ ಭೂಮ್ಯಾಮಲಕಿ, ಭೂಧಾತ್ರಿ, ಬಹುಪತ್ರ, ಬಹುಫಲ ಎಂದು ಹೆಸರು. ಭಾರತದಲ್ಲಿ ಎಲ್ಲೆಡೆ ಸಿಗುವ ವಿಶೇಷವಾಗಿ ಉಷ್ಣಪ್ರದೇಶದಲ್ಲಿ ವರ್ಷ ಋತುವಿನಲ್ಲಿ ಬೆಳೆಯುವ ಪೊದೆ ಇದು.
ಭೂಮ್ಯಾಮಲಕಿಯ ಗುಣಗಳು
ರುಚಿಯಲ್ಲಿ ಸಿಹಿ, ಕಹಿ ಹಾಗೂ ಕಷಾಯ ರಸವಿರುವುದು. ಲಘು ಗುಣ(ಬೇಗ ಜೀರ್ಣವಾಗುವಂತದ್ದು) ರೂಕ್ಷ (ಶುಷ್ಕತೆಯನ್ನು ತರುವಂತದ್ದು)ಶೀತ ವೀರ್ಯ ಹೊಂದಿದೆ. ಕಫ ಹಾಗೂ ಪಿತ್ತವನ್ನು ಶಮನಗೊಳಿಸುತ್ತದೆ.
ಉಪಯೋಗಗಳು
ಬಾಹ್ಯ ಪ್ರಯೋಗಗಳು
• ತ್ವಚೆಯ ರೋಗಗಳಲ್ಲಿ, ಇನ್ಫೆಕ್ಷನ್‌ಗಳಲ್ಲಿ ಎಲೆಯ ಕಲ್ಕವನ್ನು ತಯಾರಿಸಿ ಹಚ್ಚಲಾಗುವುದು. ಇದರಿಂದ ವ್ರಣ, ಶೋಥ ಹಾಗೂ ನೋವು ಕಡಿಮೆಯಾಗುವುದು.
• ನೇತ್ರ ರೋಗಗಳಲ್ಲಿ ಬೇರಿನ ಲೇಪನ ಮಾಡುತ್ತಾರೆ.
ಅಭ್ಯಂತರ ಪ್ರಯೋಗ
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 15 ರಿಂದ 20 ml ಎಲೆಯ ಜ್ಯೂಸನ್ನು ಕೂಡಿದರೆ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ, ಆಸಿಡಿಟಿಯನ್ನು ಕಮ್ಮಿ ಮಾಡುತ್ತದೆ, ಜಾಂಡಿಸ್ ಅನ್ನು ಗುಣಪಡಿಸುತ್ತದೆ ಹಾಗು ಅಜೀರ್ಣವನ್ನು ದೂರ ಮಾಡುತ್ತದೆ.
• ಕೆಮ್ಮು, ಆಸ್ತಮವನ್ನು ಗುಣಪಡಿಸುವ ಗುಣ ಇದಲ್ಲಿದೆ. ಇದರ ಬೇರನ್ನು ಸಕ್ಕರೆ ಜತೆ ಬೆರೆಸಿ ನಸ್ಯ ಕೊಡಲಾಗುತ್ತದೆ.
• ರಕ್ತವನ್ನು ಶುದ್ಧೀಕರಿಸುತ್ತದೆ.
• 10 ಗ್ರಾಂ ಚೂರ್ಣವನ್ನು ಸೇವಿಸಿದರೆ ಸಕ್ಕರೆ ಕಾಯಿಲೆಯವರಿಗೆ ಒಳ್ಳೆಯದು.
• ವಿಷಮ ಜ್ವರದಲ್ಲಿ ಖಾಲಿ ಹೊಟ್ಟೆಯಲ್ಲಿ 15ml ರಸ ನೀಡಲಾಗುವುದು.
• ಇದರ ಸ್ವರಸ ಸೇವಿಸುವುದರಿಂದ ಯಕೃತ್ ವೃದ್ಧಿ ಹಾಗೂ ಯಕೃತ್ತಿನ ಕಾಯಿಲೆಗಳಿಗೆ ಬಹಳ ಉಪಯೋಗಿ.
• ದೇಹಕ್ಕೆ ಬಲ ನೀಡುತ್ತದೆ.
• ದೇಹದಿಂದ ವಿಷವನ್ನು ಹೊರ ಹಾಕುತ್ತದೆ.
ಸೇವಿಸುವ ಪ್ರಮಾಣ ಸ್ವರಸ ಹತ್ತರಿಂದ ಇಪ್ಪತ್ತು ಎಂಎಲ್, ಚೂರ್ಣ ಎರಡರಿಂದ ನಾಲ್ಕು ಗ್ರಾಂ.
✒️ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ವೈದ್ಯರು.