ಕೀವ್: ರಷ್ಯಾದ ಫೈಟರ್ ಜೆಟ್ ಕಪ್ಪು ಸಮುದ್ರದ ಮೇಲೆ ಅಮೆರಿಕಾದ ಕಣ್ಗಾವಲು ಡ್ರೋನ್‌ನ ಪ್ರೊಪೆಲ್ಲರ್ ಅನ್ನು ಹೊಡೆದುರುಳಿಸಿದ್ದು ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಅಮೆರಿಕಾ ಆರೋಪಿಸಿದೆ.
ಆದರೆ ಈ ಆರೋಪವನ್ನು ತಳ್ಳಿಹಾಕಿರುವ ರಷ್ಯಾ ತನ್ನ ಯುದ್ಧವಿಮಾನ ಅಮೆರಿಕಾದ ಡ್ರೋನ್ ಅನ್ನು ಹೊಡೆದುರುಳಿಸಿಲ್ಲ. ಬದಲಾಗಿ, ಡ್ರೋನ್ ಅನ್ನು ತಡೆಯಲು ಯತ್ನಿಸಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡ ಡ್ರೋನ್ ಸಮುದ್ರಕ್ಕೆ ಬಿದ್ದಿದೆ ಎಂದು ರಷ್ಯಾ ಹೇಳುತ್ತಿದೆ. ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಇದನ್ನು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದೆ. ಅಲ್ಲದೆ ಈ ಸಂಬಂಧ ಅಮೆರಿಕ ರಷ್ಯಾದ ರಾಯಭಾರಿಗೆ ಸಮನ್ಸ್ ನೀಡಿದೆ.
ಡ್ರೋನ್ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ರಷ್ಯಾದ ಎರಡು Su-27 ಫೈಟರ್ ಜೆಟ್‌ಗಳು ಅದನ್ನು ಹೊಡೆದುರುಳಿಸಿದೆ ಎಂದು ಯುರೋಪಿಯನ್ ಕಮಾಂಡ್ ಹೇಳಿದೆ. ರಷ್ಯಾದ ಕಮಾಂಡರ್ ಒಬ್ಬರು MQ-9 ನ ಪ್ರೊಪೆಲ್ಲರ್‌ಗೆ ಹೊಡೆದಿದ್ದು ಹೀಗಾಗಿ ಅದು ಕಪ್ಪು ಸಮುದ್ರಕ್ಕೆ ಬಿದ್ದಿದೆ ಎಂದು ಹೇಳಿದೆ. ಯುಎಸ್ ಏರ್ ಫೋರ್ಸ್ ಜನರಲ್ ಜೇಮ್ಸ್ ಬಿ. ಯುಎಸ್ ಏರ್ ಫೋರ್ಸಸ್ ಯುರೋಪ್ ಮತ್ತು ಏರ್ ಫೋರ್ಸಸ್ ಆಫ್ರಿಕಾದ ಕಮಾಂಡರ್ ಹೆಕರ್, MQ-9 ವಿಮಾನವು ಅಂತರರಾಷ್ಟ್ರೀಯ ವಾಯುಪ್ರದೇಶದಲ್ಲಿ ದಿನನಿತ್ಯದ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಅದು ರಷ್ಯಾದ ವಿಮಾನ ಹೊಡೆದಿದ್ದರಿಂದಾಗಿ MQ-9 ಅಪಘಾತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದೆ.
2014ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ರಷ್ಯಾ ವಶಪಡಿಸಿಕೊಂಡಿತ್ತು. ಆದರೆ ಇಲ್ಲಿ ಯುಎಸ್ ಗುಪ್ತಚರ ವಿಮಾನಗಳ ಹಾರಾಟದ ಬಗ್ಗೆ ಮಾಸ್ಕೋ ಪದೇ ಪದೇ ಕಳವಳ ವ್ಯಕ್ತಪಡಿಸಿತ್ತು. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮೂಲಕ ಮತ್ತು ಕೀವ್‌ನೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಸಂಘರ್ಷದಲ್ಲಿ ಪರಿಣಾಮಕಾರಿಯಾಗಿ ಸೇರಿಕೊಂಡಿವೆ ಎಂದು ಕ್ರೆಮ್ಲಿನ್ ಆರೋಪಿಸಿದೆ.