ನಾಟು ನಾಟು…ಗೂ ಸಿಕ್ಕಿತು ಆಸ್ಕರ್‌

ಬೆಸ್ಟ್​ ಒರಿಜಿನಲ್​ ಸಾಂಗ್ ಆಸ್ಕರ್‌ ಪ್ರಶಸ್ತಿ

ಲಾಸ್‌ ಏಂಜಲೀಸ್‌ : ಆರ್​ಆರ್​ಆರ್ ಚಿತ್ರದ ‘ನಾಟು ನಾಟು…’ ಹಾಡು ಆಸ್ಕರ್‌ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡು ವಿಶ್ವಮಟ್ಟದಲ್ಲಿ ಸೌಂಡ್ ಮಾಡಿದೆ. ಇಂಗ್ಲಿಷ್ ಹಾಡುಗಳನ್ನು ಹಿಂದಿಕ್ಕಿ ‘ನಾಟು ನಾಟು…’ ಪ್ರಶಸ್ತಿ ಬಾಚಿಕೊಂಡಿದೆ.
‘ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಮೊದಲಾದ​ ಹಾಡುಗಳು ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ.
‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡಿನಿಂದ ನಿರ್ದೇಶಕ ಎಸ್.ಎಸ್​. ರಾಜಮೌಳಿ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಈ ಹಾಡು ಘಟಾನುಘಟಿಗಳನ್ನು ಹಿಂದಿಕ್ಕಿ ಆಸ್ಕರ್​ ರೇಸ್​ನಲ್ಲಿ ಗೆದ್ದಿದೆ. ‘ಆರ್​ಆರ್​ಆರ್​’ ಈ ಮೊದಲು ‘ಗೋಲ್ಡನ್ ಗ್ಲೋಬ್ಸ್​’ ಸೇರಿ ವಿದೇಶದ ಕೆಲವು ಪ್ರತಿಷ್ಠಿತ ಅವಾರ್ಡ್​ ಫಂಕ್ಷನ್​ನಲ್ಲಿ ಅವಾರ್ಡ್​ ಪಡೆದುಕೊಂಡಿತ್ತು. ಈಗ ಆಸ್ಕರ್ ಗೆದ್ದಿದೆ. ಎಂ.ಎಂ. ಕೀರವಾಣಿ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಡು ರಿಲೀಸ್ ಆದ ನಂತರ ಧೂಳೆಬ್ಬಿಸಿತ್ತು. ಈ ಹಾಡಿನಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್​ ಅವರ ಡ್ಯಾನ್ಸ್‌ ನೋಡಿ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಈ ಹಾಡು ರಿಲೀಸ್ ಆದಾಗ ಆಸ್ಕರ್ ಗೆಲ್ಲುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಈಗ ಈ ಹಾಡು ಪ್ರತಿಷ್ಠಿತ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top