ಪುತ್ತೂರು :ಶಾಂತಿಗೋಡು ಗ್ರಾಮದ ಪೇರಡ್ಕ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ ಭಾನುವಾರ ನಡೆಯಿತು.
ಶಾಸಕ ಸಂಜೀವ ಮಠಂದೂರು ಅಂಗನವಾಡಿ ಉದ್ಘಾಟಿಸಿ ಮಾತನಾಡಿ, ಪುತ್ತೂರು ತಾಲೂಕಿಗೆ ಐದು ಅಂಗನವಾಡಿ ಮಂಜೂರಾಗಿದೆ.ಈ ಮೂಲಕ ಮಹಿಳೆಯರ ಚಟುವಟಿಕೆ ಆರಂಭ ಆಗಿದೆ. ಬಹಳಷ್ಟು ಜನರಿಗೆ ಅಂಗನವಾಡಿ ಬಂದಾಗ ಮಕ್ಕಳು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂದುವರಿಯುವ ಕೆಲಸ ಪ್ರಸ್ತುತ ದಿನಗಳಲ್ಲಿ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಅಂಗವಾಗಿ ಕೇಂದ್ರದಲ್ಲಿ ಪೌಸ್ಟಿಕ ಆಹಾರ ಕೊಡುವ ಕೆಲಸ ಆಗಿದೆ. ಅಂಗನವಾಡಿ ಮೂಲಕ ಮಹಿಳಾ ಸ್ತ್ರೀ ಶಕ್ತಿ ಗುಂಪು ಕೆಲಸ ಮಾಡುತ್ತದೆ. ರಾಷ್ಟ್ರಿಯ ಶಿಕ್ಷಣ ನೀತಿಗೆ ಪೂರಕವಾಗಿ ಸಹಾಯಕಿಯರಿಗೆ ತರಬೇತಿ ನೀಡುವ ಕೆಲಸ ಸರಕಾರ ಮಾಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸಿಡಿಪಿಒ ಭಾರತಿ ಜೆ, ಸಿಡಿಪಿಒ ಶ್ರೀಲತಾ, ಸೂಪರ್ ವೈಸರ್ ನಾಗರತ್ನ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಧೀರ್ ಶೆಟ್ಟಿ ಕುದುರೆಪ್ಪಾಡಿ, ಪುರಂದರ, ಪಾಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಮ್ ಪೂಜಾರಿ, ಪ್ರವೀಣ್ ನಾಯ್ಕ್ ಸೇರಾಜೆ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಯಶೋಧ ಗೌಡ, ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕುಲಾಲ್,
ಭಾಗವಹಿಸಿದ್ದರು. ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ, ಶುಶೀಲಾ, ಶಾಂತಿ, .ಆಶಾ ಕಾರ್ಯಕರ್ತೆ ಜ್ಯೋತಿ ಕರ್ಬಡ್ಕ, ಹಾಗೂ ಊರವರು,, ಮಕ್ಕಳ,ಪೋಷಕರು ಉಪಸ್ಥಿತರಿದ್ದರು.