ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಆಲಂಕಾರು ವತಿಯಿಂದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಸತ್ವ ಪರೀಕ್ಷೆ ಯಕ್ಷಗಾನ ತಾಳಮದ್ದಳೆ ಸೇವೆ ನಡೆಯಿತು
ಭಾಗವತರಾಗಿ ಪದ್ಮನಾಭ ಕುಲಾಲ್, ನಿತೀಶ್ ಮನೊಳಿತ್ತಾಯ,ಚೆಂಡೆ ಮತ್ತು ಮದ್ದಳೆಯಲ್ಲಿ ಕೇಶವ ಬೈಪಡಿತ್ತಾಯ,ಚಂದ್ರ ದೇವಾಡಿಗ ನಗ್ರಿ, ಶ್ರೀಹರಿ ನಗ್ರಿ,ಚಕ್ರತಾಳದಲ್ಲಿ ಸಂಜಯ ಕಡಬ ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ ಮತ್ತು ದಿವಾಕರ ಆಚಾರ್ಯ ಗೇರುಕಟ್ಟೆ( ಶ್ರೀ ಕೃಷ್ಣ) ಅಂಬಾ ಪ್ರಸಾದ್ ಪಾತಾಳ (ಸುಭದ್ರೆ)ನಾರಾಯಣ ಭಟ್ ಆಲಂಕಾರು(ರುಕ್ಮಿಣಿ) ರಾಮ್ ಪ್ರಕಾಶ್ ಕೊಡಂಗೆ (ಅಭಿಮನ್ಯು ಮತ್ತು ಬಲರಾಮ) ರಾಘವೇಂದ್ರ ಭಟ್ ತೋಟಂತಿಲ(ದಾರುಕ) ಜಯರಾಮ ಭಟ್ ದೇವಸ್ಯ(ಅರ್ಜುನ) ಗುರು ಪ್ರಸಾದ್ ಆಲಂಕಾರು (ಭೀಮ) ಭಾಗವಹಿಸಿದ್ದರು.
ಇಷ್ಟಾರ್ಥ ಸಿದ್ಧಿಯ ಆರನೇ ತಾಳಮದ್ದಳೆಯ ಸೇವಾರ್ಥಿಗಳಾಗಿ ಬೆಂಗಳೂರಿನ ರಾಧಿಕಾ ಶ್ರೀನಿವಾಸ ರಾವ್ ಮತ್ತು ಮಕ್ಕಳು ಶರವೂರು, ರಾಮ್ ಪ್ರಕಾಶ್ ಭಟ್ ಮತ್ತು ಮನೆಯವರು ಕೊಡಂಗೆ ಪಾಲ್ಗೊಂಡಿದ್ದರು. ಶ್ರೀ ದುರ್ಗಾಂಬ ಕಲಾಸಂಗಮದ ಸದಸ್ಯ ಗುರು ಪ್ರಸಾದ್ ಆಲಂಕಾರು ಸ್ವಾಗತಿಸಿ ವಂದಿಸಿದರು.ತಾಳಮದ್ದಳೆ ಸೇವಾರ್ಥಿಗಳಿಗೆ ದೇವಸ್ಥಾನದ ವತಿಯಿಂದ ಪ್ರಸಾದವನ್ನು ನೀಡಲಾಯಿತು.
ruzyiu