ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಪುತ್ತೂರಿಗೆ 25 ಸದಸ್ಯರನ್ನೊಳಗೊಂಡ ಎನ್ ಡಿಆರ್ ಎಫ್ ತಂಡ ಆಗಮಿಸಿದೆ.
ಸದ್ಯ ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ಎನ್ ಡಿಆರ್ ಎಫ್ ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಪುತ್ತೂರು ಕೇಂದ್ರವಾಗಿರಿಸಿ ಕಾರ್ಯಾಚರಣೆ ನಡೆಸಲಿರುವ ತಂಡ, ಮಳೆಯಿಂದ ಹೆಚ್ಚು ಹಾನಿಗೊಳಗಾಗುವ ಬೆಳ್ತಂಗಡಿ, ಕಡಬ, ಬಂಟ್ವಾಳ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಪರಿಸ್ಥಿತಿ ಅವಲೋಕಿಸಲಿದೆ. ಕಾರ್ಯಾಚರಣೆಯ ವೇಳೆ ಅಪಾಯಕ್ಕೊಳಗಾದ ಜನರನ್ನು ಪತ್ತೆಹಚ್ಚಲು ಬಳಸುವ ಶ್ವಾನ ಕಾರ್ಯಾಚರಣೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳೊಂದಿಗೆ ಎನ್ ಡಿಆರ್ ಎಫ್ ತಂಡ ಆಗಮಿಸಿದೆ.
ಎರಡು ತಂಡಗಳಾಗಿ ಪುತ್ತೂರು ಹಾಗೂ ಮಡಿಕೇರಿಗೆ ಆಗಮಿಸಿರುವ ಎನ್ ಡಿಆರ್ ಎಫ್ ತಂಡದಲ್ಲಿ ಸುಮಾರು 30 ಸದಸ್ಯರಿದ್ದಾರೆ.
i9rubp