ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಪರಿವಾರ ದೈವಗಳಾದ ಗ್ರಾಮ ದೈವ ಪಂಜುರ್ಲಿ , ಮರುಳು ಧೂಮಾವತಿ ಮತ್ತು ರಾಜನ್ ದೈವಗಳಿಗೆ ವಾರ್ಷಿಕ ತಂಬಿಲ ಸೇವೆ ಸಂಪ್ರದಾಯದಂತೆ ಪತ್ತನಾಜೆಯಂದು ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಆಡಳಿತ ಟ್ರಸ್ಟಿನ ಅಧ್ಯಕ್ಷ ಮತ್ತು ದೈವದ ಗುರಿಕ್ಕಾರ ಭಾಸ್ಕರ ನೂರಿತ್ತಾಯ ಬಾರ್ಯ ನೇತೃತ್ವದಲ್ಲಿ ನಡೆದ ತಂಬಿಲ ಸೇವೆಯಲ್ಲಿ ಅರ್ಚಕ ಗುರುಪ್ರಸಾದ್ ನೂರಿತ್ತಾಯರು ಸಹಕರಿಸಿದರು .
ದೇವಳದ ಆಡಳಿತ ಟ್ರಸ್ಟಿನ ಪದಾಧಿಕಾರಿಗಳಾದ ಶೇಷಪ್ಪ ಸಾಲಿಯಾನ್, ಪ್ರಶಾಂತ ಪೈ ಬಾರ್ಯ, ನಾರಾಯಣಗೌಡ , ಮನೋಹರ ಶೆಟ್ಟಿ ರಾಮಣ್ಣ ಗೌಡ, ಚೇತನ್ ಅದಮ್ಮ,ಗುತ್ತಿನ ಮನೆಯವರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.