ಹೊಸದಿಲ್ಲಿ: ಕಾಂಗ್ರೆಸ್ ಸಂಸದ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೆ ಕಾನುನಿನ ಉರುಳಿನಲ್ಲಿ ಸಿಲುಕಿದ್ದಾರೆ. ಕೆಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ನಿಂದಿಸಿದ ಪ್ರಕರಣದಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದು, ಜಾರ್ಖಂಡ್‌ನ ಚೈಬಸ ಸಂಸದ-ಶಾಸಕರ ನ್ಯಾಯಾಲಯ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ.
ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವುದರಿಂದ ರಾಹುಲ್ ಗಾಂಧಿಗೆ ವಿನಾಯಿತಿ ನೀಡಬೇಕು ಎಂಬ ಅವರ ಪರ ವಕೀಲರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಜೂನ್ 16ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕು ಎಂದು ರಾಹುಲ್ ಗಾಂಧಿ ಅವರಿಗೆ ನಿರ್ದೇಶನ ನೀಡಿದೆ.
2018ರಲ್ಲಿ ನಡೆದಿದ್ದ ಕಾಂಗ್ರೆಸ್ ಮಹಾಧಿವೇಶನದ ಸಂದರ್ಭದಲ್ಲಿ ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿ, ಬಿಜೆಪಿ ನಾಯಕ ಪ್ರತಾಪ್ ಕಡಿಯಾರ್ ಎಂಬವರು ದಾಖಲಿಸಿದ್ದ ಮಾನಹಾನಿ ದಾವೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕೊಲೆ ಆರೋಪ ಎದುರಿಸುತ್ತಿರುವ ಯಾರಾದರೂ ಕೂಡಾ ಬಿಜೆಪಿಯ ಅಧ್ಯಕ್ಷರಾಗಬಹುದಾಗಿದೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಷಾರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.
ರಾಹುಲ್ ಗಾಂಧಿಯವರ ಈ ಹೇಳಿಕೆಯು ಮಾನಹಾನಿಕರವಾಗಿದ್ದು, ಎಲ್ಲ ಬಿಜೆಪಿ ಕಾರ್ಯಕರ್ತರಿಗೂ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿ, ಪ್ರತಾಪ್ ಕಟಿಯಾರ್ ಎಂಬ ಬಿಜೆಪಿ ನಾಯಕರೊಬ್ಬರು ಜುಲೈ ಜುಲೈ 9, 2018ರಲ್ಲಿ ಚೈಬಸಾದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜಾರ್ಖಂಡ್ ಹೈಕೋರ್ಟ್ ಸೂಚನೆಯ ಬೆನ್ನಿಗೇ, ಫೆಬ್ರವರಿ 2020ರಲ್ಲಿ ಈ ಪ್ರಕರಣ ಈ ಪ್ರಕರಣವನ್ನು ರಾಂಚಿಯ ಸಂಸದ-ಶಾಸಕರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ನ್ಯಾಯಾಲಯವು ಪದೇ ಪದೇ ಸಮನ್ಸ್‌ಗಳನ್ನು ಜಾರಿಗೊಳಿಸಿದರೂ, ರಾಹುಲ್ ಗಾಂಧಿ ವಿಚಾರಣೆಗೆ ಗೈರಾಗಿದ್ದರು. ರಾಹುಲ್ ಗಾಂಧಿ ವೈಯಕ್ತಿಕ ಹಾಜರಾತಿಯಿಂದ ತನಗೆ ವಿನಾಯಿತಿ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಚೈಬಸ ನ್ಯಾಯಾಲಯ ಚೈಬಸ ನ್ಯಾಯಾಲಯ ವಜಾಗೊಳಿಸಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಟ್ಟಿನ ಕ್ರಮ ಕೈಗೊಂಡಿರುವ ವಿಶೇಷ ನ್ಯಾಯಾಲಯ, ರಾಹುಲ್ ಗಾಂಧಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ