ಪುತ್ತೂರು: ಕಳೆದ 35 ವರ್ಷಗಳಿಂದ ಪೈಂಟ್ ಗಳ ಸೇವೆಯಲ್ಲಿ ಮನೆ ಮಾತಾಗಿರುವ ಏಳ್ಮುಡಿಯಲ್ಲಿರುವ ಶ್ರೀ ರಾಘವೇಂದ್ರ ಸ್ಟೋ ರ್ಸ್ ನಲ್ಲಿ ಏಷಿಯನ್ ಪೈಂಟ್ಸ್ ಕಂಪೆನಿಯವರ ‘ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಸರ್ವಿಸ್’ ಎಂಬ ವಿನೂತನ ವ್ಯವಸ್ಥೆ ಗುರುವಾರ ಪ್ರಾರಂಭಗೊಂಡಿತು.
ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬದಲಾದ ಕಾಲ ಘಟ್ಟದಲ್ಲಿ ಜನರ ಬಳಿಗೆ ಸೇವೆಯನ್ನು ಜನರ ಬಳಿಗೆ ವಿಸ್ತರಿಸಬೇಕಾಗಿರುವುದೇ ಇಂದಿನ ಮಾರುಕಟ್ಟೆಯ ತಂತ್ರವಾಗಿದೆ. ಯಾವುದೇ ಸಾಮಾಗ್ರಿಗಳು ಮನೆ ಬಾಗಿಲಿಗೆ ಬರಬೇಕು ಎಂಬುದು ಗ್ರಾಹಕರ ಇಚ್ಛೆಯಾಗಿದೆ. ರಾಘವೇಂದ್ರ ಸ್ಟೋರ್ಸ್ ಮೂಲಕ ಮನೆಯ ಪೈಂಟಿಂಗ್ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲಾಗುತ್ತಿದೆ. ಈ ವ್ಯವಸ್ಥೆಯಿಂದ ಮನೆಯವರ ಶ್ರಮ ಹಾಗೂ ಗ್ರಾಹಕರ ಒತ್ತಡ ಕಡಿಮೆ ಮಾಡುವಂತ ಹೊಸ ಹೆಜ್ಜೆಯಿಟ್ಟಿದ್ದು ಇಂದಿನ ಕಾಲಕ್ಕೆ ಜನರಿಗೆ ಆವಶ್ಯಕತೆಯಿದೆ ಎಂದರು.

ಏಷಿಯನ್ ಪೈಂಟ್ಸ್ ಏರಿಯಾ ಮ್ಯಾನೇಜರ್ ಸುಹೈಲ್ ಮಾತನಾಡಿ, ಬ್ಯೂಟಿಫುಲ್ ಹೋಮ್ ಪೈಂಟಿಂಗ್ ಎನ್ನುವುದು ಏಷಿಯನ್ ಪೈಂಟ್ಸ್ ನ ಅಧಿಕೃತ ಸೇವೆಯಾಗಿದೆ. ಪುತ್ತೂರಿನ ಗ್ರಾಹಕರಿಗೆ ರಾಘವೇಂದ್ರ ಸ್ಟೋರ್ಸ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಈ ಸೇವೆ ಪ್ರಾರಂಭಿಸಿದ್ದು ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ ಎಂದರು.
ದೇವ ಟ್ರೇಡರ್ಸ್ ನ ಮಾಲಕ ರವೀಂದ್ರನ್ ಮಾತನಾಡಿ, ಏಷಿಯನ್ ಪೈಂಟ್ಸ್ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿರುವ ರಾಘವೇಂದ್ರ ಸ್ಕೋರ್ಸ್ ನಲ್ಲಿ ಹೊಸ ಹೋಮ್ ಪೈಂಟಿಂಗ್ ಸರ್ವಿಸ್ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಅದು ಹೆಸರಿನಲ್ಲಿಯೇ ಆಕರ್ಷಣೆಯಿದ್ದು ಪುತ್ತೂರಿನ ಜನತೆಗೆ ಅನುಕೂಲವಾಗಲಿದೆ ಎಂದರು.

ಕಟ್ಟಡದ ಮಾಲಕರು, ಹಿಮಾ ರೆಫ್ರಿಜರೇಶನ್ ಸಂಸ್ಥೆಯ ಮಾಲಕ ಯು.ಪಿ.ರಾಜೇಶ್ ಮಾತನಾಡಿ, ಪೈಂಟ್ ಬಗ್ಗೆ, ಅಪಾರ ಅನುಭವ ಹೊಂದಿರುವ ಶ್ರೀ ರಾಘವೇಂದ್ರ ಸ್ಟೋರ್ಸ್ ಸಂಸ್ಥೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಕ್ಷುರಿ, ಪ್ರೀಮಿಯಂ ಹಾಗೂ ಇಕೋನಮಿ ರೇಂಜ್ ಉತ್ಪನ್ನಗಳನ್ನು ವಿತರಿಸುತ್ತಾ ಜನರ ಮೆಚ್ಚಿಗೆಗೆ ಪಾತ್ರವಾಗಿದೆ ಎಂದರು.
ಸಂಸ್ಥೆಯ ಮಾಲಕ ಸತ್ಯಶಂಕರ ಭಟ್ ಮಾತನಾಡಿ, ಕಳೆದ 35 ವರ್ಷಗಳಿಂದ ಸೇವೆ ನೀಡುತ್ತಿರುವ ರಾಘವೇಂದ್ರ ಸ್ಟೋರ್ಸ್ ಕೇವಲ ವ್ಯಾಪಾರ ಸಂಸ್ಥೆಯಾಗಿರದೆ ಜನರಿಗೆ ಅತ್ಯುತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ವ್ಯಾಪಾರ ಧರ್ಮದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಾ ಸಂಸ್ಥೆ ಮುನ್ನಡೆಯುತ್ತಿದೆ. ಗ್ರಾಹಕರ ಸಹಕಾರ, ಸಲಹೆಯಂತೆ ಸೇವೆ ನೀಡುತ್ತಾ ಬಂದಿದ್ದು ಪೈಂಟಿಂಗ್ ನಲ್ಲಿ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿದೆ. ಇದಕ್ಕೆ ಕಂಪನಿ ಹಾಗೂ ಗ್ರಾಹಕರ ಸಹಕಾರ ದೊರೆತಿದೆ ಎಂದು ಹೇಳಿದರು.
ಏಷಿಯನ್ ಪೈಂಟ್ಸ್ ನ ಸೀನಿಯರ್ ಸೇಲ್ಸ್ ಆಫೀಸರ್ ಮುಸ್ತಾಫ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಪೈಂಟಿಂಗ್ ಗುತ್ತಿಗೆದಾರ ಮಿಥುನ್ ವಂದಿಸಿದರು.