ಪುತ್ತೂರು: ಐಲೇಸಾ ದಿ ವಾಯ್ಸ್ ಆಪ್ ಓಶನ್ (ರಿ) ಶಿವಾಲಯ ಫೌಂಡೇಶನ್ ಮುಂಬೈ ಸಹಕಾರದಿಂದ ಜನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಗೌಡ ಅವರ ಸಾಹಿತ್ಯದಲ್ಲಿ ರಚನೆಯಾದ ಆಲ್ಬಮ್ ಸಾಂಗ್ “ದರಿಪು ದೈವ ನಿಲೆ ಪದಿನಾಜಿ ಕಟ್ಟಲೆ” ಭಾನುವಾರ ಸಂಜೆ ಬಿಡುಗಡೆಗೊಂಡಿತು.
ನಿಟ್ಟೆ ಯುನಿರ್ವಸಿಟಿ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಆಲ್ಬಂ ಸಾಂಗ್ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿವಾಯ ಫೌಂಡೇಶ್ ನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರ್, ಮೆಡಿಕಲ್ ಸಲಹೆಗಾರ್ತಿ ಡಾ.ಸ್ವರ್ಣಲತ ಶೆಟ್ಟಿ, ಜನರಲ್ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಪಂಜ ಪಾಲ್ಗೊಂಡಿದ್ದು, ಕಾರ್ಯಕ್ರಮ ಸಂಯೋಜಕ ಮಂಜುನಾಥ ಕಾಮತ್ ಉಪಸ್ಥಿತರಿದ್ದರು.
ಆಲ್ಬಂ ಸಾಂಗ್ ಗೆ ವಿ. ಮಹೋಹರ್ ಸಂಗೀತ ರಚಿಸಿದ್ದು, ಹರಿಪ್ರಸಾದ್ ಚೆಲ್ಯಾರು ಸಂಗೀತ ಹಾಡಿದ್ದಾರೆ.