ಬಂಟ್ವಾಳ : ಸರಕಾರಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಪಾಣೆಮಂಗಳೂರಿನ ನೆಹರೂನಗರದಲ್ಲಿ ನಡೆದಿದೆ.
ಮಂಗಳೂರು ನಿವಾಸಿ ಅಲಿಸ್ಮರ್ ಡಿಸೋಜ (24) ಅಪಘಾತದಿಂದ ಮೃತಪಟ್ಟವರು.
ವಿಟ್ಲದಲ್ಲಿ ನಡೆದ ಗೃಹಪ್ರವೇಶದಲ್ಲಿ ಪಾಲ್ಗೊಂಡು ಮತ್ತೊಂದು ಬೈಕಿನಲ್ಲಿದ್ದ ಸ್ನೇಹಿತರ ಜತೆ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್ ಟಿಸಿ ಅಂಬಾರಿ ಬಸ್ಸು ನೆಹರೂನಗರದಲ್ಲಿ ಟೆಂಪೊ ಟ್ರಾವೆಲರ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ, ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.