ನಮ್ಮ ವಾಯುನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ : ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್‌ ಪ್ರಧಾನಿ

ನಡುರಾತ್ರಿ ಸೇನಾ ಮುಖ್ಯಸ್ಥ ಫೋನ್‌ ಮಾಡಿ ದಾಳಿಯಾದ ವಿಚಾರ ತಿಳಿಸಿದರು ಎಂದ ಶಹಬಾಝ್ ಷರೀಫ್

ಇಸ್ಲಾಮಾಬಾದ್: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಕ್ಷಿಪಣಿ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ ಸೇರಿದಂತೆ ವಿವಿಧ ವಾಯುನೆಲೆಗಳ ಮೇಲೆ ನಿಖರ ದಾಳಿ ನಡೆಸಿದ್ದನ್ನು ಇದೇ ಮೊದಲ ಬಾರಿಗೆ ಪಾಕಿಸ್ಥಾನದ ಪ್ರಧಾನಿ ಶಹಬಾಝ್ ಷರೀಫ್ ಒಪ್ಪಿಕೊಂಡಿದ್ದಾರೆ.

ಮೇ 9 ಮತ್ತು 10ರ ನಡುವಿನ ರಾತ್ರಿ 2.30ಕ್ಕೆ ಪಾಕಿಸ್ಥಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸ್ವತಃ ಕರೆ ನನ್ನನ್ನು ಎಬ್ಬಿಸಿ ಭಾರತ ವಾಯುನೆಲೆಗಳ ಮೇಲೆ ದಾಳಿ ಮಾಡಿರುವುದನ್ನು ತಿಳಿಸಿದರು ಎಂದು ಷರೀಫ್‌ ಹೇಳಿದ್ದಾರೆ. ಇದುವರೆಗೂ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ಪಾಕಿಸ್ಥಾನ ನಿರಾಕರಿಸುತ್ತಾ ಬಂದಿತ್ತು. ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ಹಲವು ನಾಯಕರು ಕೂಡ ಭಾರತದ ಸೇನೆಯ ಕಾರ್ಯಾಚರಣೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಲೇವಡಿ ಮಾಡಿದ್ದರು. ಈಗ ಸ್ವತಹ ಪಾಕ್ ಪ್ರಧಾನಿಯೇ ಭಾರತದ ದಾಳಿಯನ್ನು ಒಪ್ಪಿಕೊಂಡಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.



















































 
 

ಇಸ್ಲಾಮಾಬಾದ್‌ನ ಪಾಕಿಸ್ಥಾನ ಸ್ಮಾರಕದಲ್ಲಿ ನಡೆದ ವಿಶೇಷ ಯೂಮ್-ಇ-ತಷ್ಕರ್ ಸಮಾರಂಭದಲ್ಲಿ ಷರೀಫ್ ಈ ಹೇಳಿಕೆ ನೀಡಿದ್ದಾರೆ. ಮೇ 9-10ರ ಮಧ್ಯರಾತ್ರಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಕರೆ ಮಾಡಿ, ಹಿಂದೂಸ್ಥಾನಿ ಕ್ಷಿಪಣಿ ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳಿಗೆ ಅಪ್ಪಳಿಸಿದೆ ಎಂದು ಮಾಹಿತಿ ನೀಡಿದರು. ಆದರೆ ಜನರಲ್ ಅವರ ಧ್ವನಿಯಲ್ಲಿ ವಿಶ್ವಾಸ, ಆತ್ಮವಿಶ್ವಾಸ ಮತ್ತು ರಾಷ್ಟ್ರಪ್ರೇಮ ಇತ್ತು ಎನ್ನುವುದನ್ನು ನಾನು ದೇವರ ಮೇಲೆ ಪ್ರಮಾಣ ಮಾಡಿ ಹೇಳಬಲ್ಲೆ ಎಂದಿದ್ದಾರೆ.

ನಮ್ಮ ವಾಯುಪಡೆ ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ದೇಶಿ ತಂತ್ರಜ್ಞಾನವನ್ನು ಬಳಸಿದೆ; ಆದರೆ ಅವರು ಅತ್ಯಾಧುನಿಕ ಸಾಧನ ಸಲಕರಣೆಗಳು ಮತ್ತು ತಂತ್ರಜ್ಞಾನವನ್ನು ಚೀನಿ ಜೆಟ್‌ಗಳ ಮೇಲೆ ಬಳಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದ ಸೇನೆ ಈ ಮೊದಲೇ ಪಾಕಿಸ್ಥಾನದ ವಾಯುನೆಲೆಗಳು ಮತ್ತು ಉಗ್ರ ನೆಲೆಗಳ ಮೇಲೆ ಮಾಡಿದ ದಾಳಿಯ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿ ಸಕ್ಷ್ಯ ಒದಗಿಸಿದ್ದರೂ ಪಾಕಿಸ್ಥಾನ ದಾಳಿಯಾಗಿರುವುದನ್ನು ಒಪ್ಪಿಕೊಂಡಿರಲಿಲ್ಲ. ಭಾರತದಲ್ಲೂ ಕೆಲವರು ಆಪರೇಷನ್‌ ಸಿಂದೂರ ಕಾರ್ಯಾಚರಣೆ ಅಪನಂಬಿಕೆ ವ್ಯಕ್ತಪಡಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top