ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಕಾಮಗಾರಿ | ರೈಲು ಸಂಚಾರ ತಾತ್ಕಾಲಿಕ ಬಂದ್‍

ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೇ ರಸ್ತೆಯಲ್ಲಿ ಕಾಮಗಾರಿ ಪ್ರಯುಕ್ತ ಜೂ.1 ರಿಂದ ನವೆಂಬರ್ 1 ರ ವರೆಗೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಈ ವಿದ್ಯುದೀಕರಣ ಕಾಮಗಾರಿ ನಡೆಯುವ  ಈ ಮಾರ್ಗದಲ್ಲಿ ಶನಿವಾರ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಹಾಗೂ ಭಾನುವಾರಗಳಂದು ಸಂಚರಿಸುವ ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸಪ್ರೆಸ್  ರದ್ದಾಗಲಿದೆ.

ಜೂನ್ 1 ರಿಂದ ಅಕ್ಟೋಬರ್ 30ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಟ್ರೈ-ವೀಕ್ ಎಕ್ಸ್‍ ಪ್ರೆಸ್ ರೈಲು, ಜೂನ್ 2 ರಿಂದ ಅಕ್ಟೋಬರ್ 31ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಮಂಗಳೂರು-ಯಶವಂತಪುರ ಟಿ. ವೀ ಎಕ್ಸ್‌ಪ್ರೆಸ್ರೈಲು, ಜೂನ್ 2 ರಿಂದ ಅಕ್ಟೋಬರ್ 31ರವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಸಂಚರಿಸುವ ಯಶವಂತಪುರ-ಕಾರವಾರ ಟಿವೀಕ್ಲಿ ಎಂ ರೈಲು, ಜೂನ್ 3 ರಿಂದ ನವೆಂಬರ್ 1ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರಗಳಂದು ಸಂಚರಿಸುವ ಕಾರವಾರ-ಯಶವಂತಪುರ ಟಿ-ವೀಕಿ, ಎಕ್ಸ್‍ ಪ್ರೆಸ್‍  ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.



















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top