ಬಂಟ್ವಾಳ: ಎಂ.ಡಿ.ಎಂ.ಎ ಮಾದಕ ವಸ್ತು ಸೇವಿಸುವುದರ ಜತೆಗೆ ಮಾರಾಟ ಮಾಡುವ ಉದ್ದೇಶದಿಂದ ಅವಿತುಕೊಂಡಿದ್ದ ಮೂವರು ಆರೋಪಿಗಳ ಬಂಟ್ವಾಳ ಪೊಲೀಸರು ಬಂಧಿಸಿ, ಆರೋಪಿಗಳಿಂದ ಲಕ್ಷಾಂತರ ರೂ ಮೌಲ್ಯದ ವಿವಿಧ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ನಂದಾವರ ಬಸ್ತಿಗುಡ್ಡೆ ನಿವಾಸಿ ಮೊಹಮ್ಮದ್ ಇಮ್ಮಿಯಾಜ್, ನಂದಾವರ ಬಸ್ತಿಗುಡ್ಡೆ ನಿವಾಸಿ ಯೂನಸ್, ಹಾಗೂ ಪುತ್ತೂರು ನರಿಮೊಗರು ಪುರುಷರಕಟ್ಟೆ ನಿವಾಸಿ ಮೊಹಮ್ಮದ್ ಇಟ್ಬಾಲ್ ಬಂಧಿತ ಆರೋಪಿಗಳು.
ಬಂಧಿತರಿಂದ 5 ಸಾವಿರ ಮೌಲ್ಯದ ಮೌಲ್ಯದ 2.99 ಗ್ರಾಂ ತೂಕದ ಎಂ.ಡಿ.ಎಂ., ಖಾಲಿ 5 ಪ್ಲಾಸ್ಟಿಕ್ ಕವರ್, 30 ಲಕ್ಷ ಮೌಲ್ಯದ ಕಾರು, 45 ಸಾವಿರ ರೂ. ಮೌಲ್ಯದ ನಾಲ್ಕು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ನಗರ ಠಾಣಾ ಪೋಲೀಸರು ರೌಂಡ್ಸ್ ನಲ್ಲಿದ್ದ ವೇಳೆ ಸಂಶಯದ ಮೇಲೆ ವಿಚಾರಿಸಿದಾಗ ಇವರು ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುವ ವಿಚಾರ ಬೆಳಕಿಗೆ ಬಂದಿದೆ. ಬಂಟ್ವಾಳ ಈ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.