ಇನ್ನೋರ್ವ ಉಗ್ರನ ಬಲಿ : ನಸುಕಿನ ಹೊತ್ತು ನಡೆದ ಎನ್‌ಕೌಂಟರ್‌

ಮೂವರು ಭಯೋತ್ಪಾದಕರ ಬೇಟೆಗೆ ತೀವ್ರ ಕಾರ್ಯಾಚರಣೆ

ಶ್ರೀನಗರ : ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಇನ್ನೋರ್ವ ಉಗ್ರನನ್ನು ಬೇಟೆಯಾಡಿವೆ. ಗುರುವಾರ ನಸುಕಿನ ಹೊತ್ತು ನಡೆದ ಗುಂಡಿನ ಕಾಳದಗದಲ್ಲಿ ಓರ್ವ ಉಗ್ರ ಸತ್ತಿದ್ದು, ಹೋರಾಟ ನಡೆಯುತ್ತಿದೆ.

ಪುಲ್ವಾಮ ಜಿಲ್ಲೆಯ ತ್ರಾಲ್‌ನ ನಾದಿರ್‌ ಎಂಬಲ್ಲಿ ಎನ್‌ಕೌಂಟರ್‌ ನಡೆಯುತ್ತಿದೆ. ಜೈಶ್‌ ಇ ಮೊಹಮ್ಮದ್‌ ಉಗ್ರ ಸಂಘಟನೆಯ ಮೂವರು ಉಗ್ರರು ಇಲ್ಲಿ ಅಡಗಿರುವ ಮಾಹಿತಿ ಸಿಕ್ಕಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಓರ್ವ ಸತ್ತಿದ್ದು, ಇನ್ನಿಬ್ಬರ ಬೇಟೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.



















































 
 

ಎರಡು ದಿನಗಳ ಹಿಂದೆಯಷ್ಟೇ ಲಷ್ಕರ್‌ ಇ ತೈಬಾದ ಮೂವರು ಉಗ್ರರನ್ನು ಶೊಪಿಯಾನ್‌ ಜಿಲ್ಲೆಯ ಕೆಲ್ಲರ್‌ನಲ್ಲಿ ಭದ್ರತಾ ಪಡೆ ಕೊಂದು ಹಾಕಿತ್ತು. ಅದರ ಬೆನ್ನಿಗೆ ಇಂದು ನಸುಕಿನ ಹೊತ್ತು ಮತ್ತೆ ಮೂವರು ಉಗ್ರರನ್ನು ಭದ್ರತಾ ಪಡೆ ಬಲೆಗೆ ಕೆಡವಿಕೊಂಡು ಬೇಟೆಯಾಡುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top