ಪುತ್ತೂರು : ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಗವಾನ್ ಶ್ರೀ ಬುದ್ಧ ಜಯಂತಿ ಆಚರಣೆ ತಾಲೂಕು ಆಡಳಿತ ಸೌಧದಲ್ಲಿರುವ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಪುರಂದರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ತನ್ನ ಎಳೆಯ ವಯಸ್ಸಿನಲ್ಲೇ ಎಲ್ಲವನ್ನೂ ತ್ಯಜಿಸಿ ತಪಸ್ಸನ್ನಾಚರಿಸಿ ಸಮಾಜ, ದೇಶದ ಉದ್ಘಾರ ಆಗಬೇಕು ಎಂಬುದನ್ನು ಜಗತ್ತಿಗೆ ಸಾರಿದವರು. ಇಂತಹ ಮಾಹಾತ್ಮರ ಸ್ಮರಣೆ ಮೂಲಕ ಜಯಂತಿ ಆಚರಣೆ ಮಾಡುವುದು ಮುಂದಿನ ಪೀಳಿಗೆಗೆ ತಿಳಿಯುವ ಉದ್ದೇಶದಿಂದ ಮಾಡಲಾಗುತ್ತದೆ ಎಂದ ಅವರು, ಕಾನೂನು ಬೇರೆ, ತತ್ವಾಚರಣೆ ಬೇರೆ. ಕಾನೂನು ಪಾಲನೆಯಾದರೆ, ತತ್ವಾಚರಣೆ ನಮ್ಮ ಮನಸ್ಸಿನ ವಿಚಾರಕ್ಕೆ ಬಿಟ್ಟದ್ದು. ಈ ನಿಟ್ಟಿನಲ್ಲಿ ಬುದ್ಧ ಜಯಂತಿ ಆಚರಣೆ ಅಚ್ಚಳಿಯದೇ ಉಳಿಯಲಿ ಎಂದರು.
ವೇದಿಕೆಯಲ್ಲಿ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಾನ್ಸನ್ ಡಿ’ಸೋಜಾ, ಭೂದಾಖಲೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಸಮಾಜ ಕಲ್ಯಾಣಾಧಿಕಾರಿ ವಿನಯ ಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕು ಕಚೇರಿ ಸಿಬ್ಬಂದಿ ದಯಾನಂದ ಸ್ವಾಗತಿಸಿದರು. ಉಪತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.