ಹಾಸನ : ನಗರದಲ್ಲಿ ನೂತನವಾಗಿ ನವೀಕರಣಗೊಂಡ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ ಶಾಖೆಯನ್ನು ಖ್ಯಾತ ಚಲನಚಿತ್ರ ನಟಿ ಮಿಲನ ನಾಗರಾಜ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು.
ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಕಾಂತ್ ಮಾತನಾಡಿ, ನೂತನವಾಗಿ ಆರಂಭಗೊಂಡ ಶಾಖೆಯಲ್ಲಿ ಅತೀ ವಿನೂತನ ರೀತಿಯ ಹೊಸ ಹೊಸ ಡಿಸೈನ್ ಗಳನ್ನು ಒಳಗೊಂಡಿದ್ದು, ಈ ಆಭರಣಗಳು ಜನರ ಮನಸ್ಸನ್ನು ಮೆಚ್ಚಿಸುವಂತಹದಾಗಿದೆ ಹಾಗೂ ಗ್ರಾಹಕ ಸ್ನೇಹಿಯಾಗಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ ಎಂದರು.

2007ರಲ್ಲಿ ಹಾಸನಕ್ಕೆ ಮೊಟ್ಟ ಮೊದಲ ಬಾರಿಗೆ 916 ಹಾಲ್ ಮಾರ್ಕ್ ಪರಿಚಯಿಸಿದ ಹೆಮ್ಮೆ ಜಿ.ಎಲ್. ಆಚಾರ್ಯದಾಗಿದೆ. ಸುಮಾರು 18 ವರ್ಷಗಳ ಕಾಲ ಸುದಿರ್ಘ ಸೇವೆಯನ್ನು ಹಾಸನದ ಜನೆತೆಗೆ ಉಣಬಡಿಸಲಾಗುತ್ತಿದೆ. ಇವರಲ್ಲಿ ನೂತನವಾದ ಟ್ರೇಡಿಂಗ್‌ಗೆ ತಕ್ಕ ಚಿನ್ನಾಭರಣ ಹಾಗೂ ಡೈಮಂಡ್ ಕಲೆಕ್ಷನ್ ಹಾಗೂ ಮದುವೆ, ನಾಮಕರಣ, ಹಬ್ಬ ಹರಿದಿನಗಳಿಗೆ ಸೂಕ್ತವಾದ ರೀತಿಯ ಆಭರಣಗಳು ಇಲ್ಲಿ ದೊರೆಯುತ್ತವೆ. ನೀವೂ ಕೂಡ ಕುಟುಂಬ ಸಮೇತರಾಗಿ ಭೇಟಿ ನೀಡಿ ನಿಮಗೆ ಬೇಕಾದ ವಿನೂತನ ಮಾದರಿಯ ಆಭರಣಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಇಂದಿನಿಂದ ಸ್ವರ್ಣ ನಿಧಿ ಸ್ಕಿಮ್ ಸಹ ಜನರಿಗೆ ಪರಿಚಯಿಸಿದ್ದು, ನೀವೂ ಕೂಡ ಇದರಲ್ಲಿ ಹಣವನ್ನು ನಂಬಿಕೆಯಿಂದ ಹಣ ಹೂಡಿಕೆ ಮಾಡಬಹುದು ಎಂದು ಅವರು ತಿಳಿಸಿದರು.
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಎಲ್ಲಾ ಶಾಖೆಯಲ್ಲಿಯೂ ನಿಮಗೆ ಬೇಕಾದ ವಿಧವಿಧವಾದ ಆಭರಣಗಳು ದೊರೆಯುತ್ತವೆ. ಹಾಸನ, ಪುತ್ತೂರು, ಸುಳ್ಯ, ಕುಶಾಲನಗರ, ಹಾಗೂ ಮೂಡಬಿದರೆಯಲ್ಲಿ ಶಾಖೆಗಳನ್ನು ಒಳಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ಚೇರ್ಮನ್ ಬಲರಾಮ್, ನಿರ್ದೇಶಕ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ ಹಾಗೂ ಕುಟುಂಬದವರು, ಮತ್ತು ಸಿಬ್ಬಂದಿ ಭಾಗವಹಿಸಿದ್ದರು.