ಪುತ್ತೂರು : 2021-22 ನೇ ಸಾಲಿನ ಭಾರತ್ ಸ್ಕೌಟ್ಸ್ ಗೈಡ್ ನಾ ಕಬ್ ವಿಭಾಗದಲ್ಲಿ ತೃತೀಯ ಚರಣ ಸುವರ್ಣ ಗರಿ ಪ್ರಶಸ್ತಿ ಯನ್ನು ಪಿಜಕ್ಕಳ ಸ ಕಿ ಪ್ರಾ ಶಾಲೆಯ ಶಾಲೆಯ 4ನೇ ತರಗತಿಯ ಸಾತ್ವಿಕ್ ರವರಿಗೆ ಲಭಿಸಿದೆ .
ಜಿಲ್ಲಾಧಿಕಾರಿಗಳ ನಿವಾಸದಲ್ಲಿ 2021-22 ನೇ ಸಾಲಿನ ತೃತೀಯ ಚರಣ ಕಬ್,ಸುವರ್ಣ ಗರಿ ಬುಲ್ ಬುಲ್, ತೃತೀಯ ಸೋಪಾನ ಸ್ಕೌಟ್ಸ್ ಮತ್ತು ಗೈಡ್ಸ್, ನಿಪುನ್ರೋವರ್ಸ್ ಮತ್ತು ರೇಂಜರ್ಸ್ ಪ್ರಶಸ್ತಿ ಪತ್ರ ಪ್ರಧಾನ ಸಮಾರಂಭ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಸುವರ್ಣ ಗರಿ ಪ್ರಶಸ್ತಿ ಪ್ರದಾನ ಮಾಡಿದರು .
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ,ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ ಮೋಹನ್ ಆಳ್ವ, ಮಾಜಿ ಸಚಿವ, ಮಾಜಿ ಸ್ಕೌಟ್ ಆಯುಕ್ತ ನಾಗರಾಜ್ ಶೆಟ್ಟಿ, ಜಿಲ್ಲಾ ಗೈಡ್ ಆಯುಕ್ತೆ ಜಯವಂತಿ ಸೋನ್ಸ್, ಜಿಲ್ಲಾ ಕಾರ್ಯದರ್ಶಿ ಎಂ ಜಿ ಕಜೆ,ಜಿಲ್ಲಾ ಕೋಶಾಧಿಕಾರಿ ಅನಿಲ್ ಕುಮಾರ್, ರಾಜ್ಯ ಸ್ಕೌಟ್ ಪ್ರತಿನಿಧಿ ಶ್ರೀ ತ್ಯಾಗo ಹರೇಕಳ, ಜಿಲ್ಲಾ ಸ್ಕೌಟ್ ಸಂಘಟನಾ ಶಿಕ್ಷಕ ನವೀನ್ ಚಂದ್ರ ಅಂಬೂರಿ, ಜಿಲ್ಲಾ ಗೈಡ್ ಸಂಘಟನಾ ಶಿಕ್ಷಕಿ ಫ್ಲೇವಿ ಡಿ ಸೋಜ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ, ಜಿಲ್ಲಾ ಸಹಾಯಕ ಆಯುಕ್ತ ಉಪಸ್ಥಿತರಿದ್ದರು. ಸಾತ್ವಿಕ್ ಸುಂದರ ಗೌಡ ಪೊಳಲಿ ಹಾಗೂ ಗೀತಾ ಜಿ. ದಂಪತಿ ಪುತ್ರ