ಪುತ್ತೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೆ ಮತ್ತೊಬ್ಬ ಹಿಂದೂ ಮುಖಂಡನಿಗೆ ಬೆದರಿಕೆ ಹಾಕಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೂ ಕಾರ್ಯಕರ್ತ ಭರತ್ ಕುಮ್ಮೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆಯನ್ನು ಹಾಕಲಾಗಿದೆ
ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲಿ ಬಂದು ಕೊಲೆ ಮಾಡುತ್ತೇವೆ’ ಎಂದು ಜೀವ ಬೆದರಿಕೆವುಳ್ಳ ಬರಹವನ್ನು ಹಾಕಿ ಪೋಸ್ಟ್ ಮಾಡಲಾಗಿದೆ. ಹನ ಶೆಟ್ಟಿ ಫೋಟೋಗೆ ರೈಟ್ ಮಾರ್ಕ್ ಹಾಕಿ ಪೊನ್ನು ಹಾಕಿದ್ದು, ಅದರ ಬದಿಯಲ್ಲಿ ಭರತ್ ಅವರ ಫೋಟೋವನ್ನು ಹಾಕಲಾಗಿದೆ. ಭರತ್ ಕುಮ್ಮೆಲು ಎಸ್‌ಡಿಪಿಐ ಮುಖಂಡ ಅಸಫ್ ಕಲಾಯಿ ಹತ್ಯೆಯ ಆರೋಪಿಯಾಗಿದ್ದಾರೆ.
ಭರತ್ ಮಾತ್ರವಲ್ಲದೆ, ಸುಹಾಸ್ ಹತ್ಯೆ ಬಳಿಕ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಸೇರಿದಂತೆ 3 ರಿಂದ 5 ಮಂದಿ ಹಿಂದೂ ಮುಖಂಡರಿಗೆ ಜೀವ ಬೆದರಿಕೆಯನ್ನು ಹಾಕಲಾಗಿದೆ ಎನ್ನಲಾಗಿದೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯ ಫೋಸ್ಟ್ ವೈರಲ್ ಆಗಿದ್ದು, ಪೊಲೀಸರು ಸಂಬಂಧ ಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.