ಪುತ್ತೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಕೊಲೆಯಾದ ಸಂದರ್ಭ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಸ್ಥಾನದಲ್ಲಿರುವ ಶಾಸಕ ಯು.ಟಿ ಖಾದರ್ ಸುಹಾಸ್ ಕೊಲೆಯಲ್ಲಿ ಫಾಝೀಲ್ ಕುಟುಂಬದವರ ಕೈವಾಡವಿಲ್ಲ, ಅವನ ತಂದೆ ತಮ್ಮಂದಿರು ನನಗೆ ಕರೆ ಮಾಡಿ ನಮಗೆ ಅಂತಹ ಪ್ರತಿಕಾರದ ಭಾವನೆ ಇಲ್ಲ, ನಾವು ಮಾಡಲೂ ಇಲ್ಲ ಎಂದಿದ್ದರು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವೇ ಹೊತ್ತಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ಪೊಲೀಸ್ ಕಮಿಷನರ್ ಆರೋಪಿಗಳ ಬಗ್ಗೆ ವಿವರಿಸುತ್ತಾ ಇದೇ ಖಾದರ್ ಸಮರ್ಥಿಸಿದ ಫಾಝೀಲ್ ನ ಸಹೋದರ ಆದೀಲ್ 5 ಲಕ್ಷ ರೂಪಾಯಿ ನೀಡಿ ಸುಹಾಸ್ ನ ಕೊಲೆ ಮಾಡಿಸಿದ್ದ ಎಂದಿದ್ದಾರೆ.
ಆ ಕೊಲೆಯಲ್ಲಿ ಆರೋಪಿಯಾಗಿಯೂ ಆದೀಲ್ ಬಂಧನಕೊಳ್ಳಕ್ಕಾಗಿದ್ದಾನೆ. ಸ್ಪೀಕರ್ ಸ್ಥಾನದಲ್ಲಿರುವ ಯು.ಟಿ ಖಾದರ್ ಈ ಘಟನೆಯನ್ನು ತಿರುಚಲು ನೋಡಿದ್ರಾ..? ಅಥವಾ ಆರೋಪಿಗಳ ರಕ್ಷಣೆಗೆ ಇಳಿದ್ರಾ..? ಎನ್ನುವ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಸ್ಪೀಕರ್ ಸಮರ್ಥಿಸಿದ ವ್ಯಕ್ತಿಗಳೇ ಕೊಲೆ ಆರೋಪಿಗಳಾಗಿರುವಾಗ ಯು ಟಿ ಖಾದರ್ ನೈತಿಕ ಹೊಣೆ ಹೊತ್ತು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಹಿಂದೂಗಳ ಜೊತೆ ನಾನು ಒಗ್ಗಟ್ಟಿದ್ದೇನೆ ಎಂದು ಬಿಂಬಿಸಲು ನೇಮ, ಜಾತ್ರೆ, ಪೂಜೆಗೆ ಹೋಗಿ ಕೇಸರಿ ಶಾಲು ಹಾಕುವ ನಿಮ್ಮ ಮನಸ್ಥಿತಿ ಈ ಹಿಂದೂ ಕಾರ್ಯಕರ್ತನ ಕೊಲೆಯಲ್ಲಿ ಆರೋಪಿಗಳ ಸಮರ್ಥಿಸಿದಾಗ ನಿಮ್ಮ ಮುಖವಾಡ ಕಳಚಿಬಿತ್ತು.
ವಕ್ಫ್ ಪ್ರತಿಭಟನೆಯಂದೇ ಎಚ್ಚರಿಸಿದ್ದೇವು : ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಎರಡು ವಾರಗಳ ಹಿಂದೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲೇ ಹಿಂದೂ ಕಾರ್ಯಕರ್ತರ ಮೇಲೆ ದಾಳಿಗೆ ಸಂಚು ನಡೆಯುತ್ತಿರುವ ಬಗ್ಗೆ ಎಚ್ಚರಿಸಿದ್ದೆವು.
ನಾವು ಎಚ್ಚರಿಸಿದ ಕೂಡಲೇ ಮತೀಯ ಶಕ್ತಿಗಳು , ಎಡಚರು ನಮ್ಮ ವಿರುದ್ಧವೇ ಧ್ವನಿಎತ್ತಿದವು. ಈಗ ಅವರೆಲ್ಲ ಸುಹಾಸ್ ಕೊಲೆಯನ್ನು ಸಮರ್ಥಿಸುತ್ತಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಫಾಝೀಲ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೀಡಿದಂತೆ ಸುಹಾಸ್ ಶೆಟ್ಟಿ ಕುಟುಂಬಕ್ಕೂ ಸರ್ಕಾರ 25 ಲಕ್ಷ ರೂಪಾಯಿ ತಕ್ಷಣ ನೀಡಬೇಕು. ಫಾಝೀಲ್ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಸಿಗುವಂತೆ ಯು.ಟಿ ಖಾದರ್ ಅಂದು ಬಹಳ ಶ್ರಮಪಟ್ಟು ಇಂದು ಫಾಝೀಲ್ ಕುಟುಂಬ ಸುಹಾಸ್ ಕೊಲೆಯಲ್ಲಿ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡದ್ದು ನಾಚಿಕೆಗೇಡಿನ ಸಂಗತಿ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.