ಸವಣೂರು: ವಿದ್ಯಾರಶ್ಮಿ ವಿದ್ಯಾಲಯ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾದ ವಿದ್ಯಾರಶ್ಮಿ ವಿದ್ಯಾಲಯದ 41 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಶೇಕಡಾ ಫಲಿತಾಂಶ ಲಭಿಸಿದೆ. 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಶಿಷ್ಟ ಶ್ರೇಣಿಯ ಸಾಧಕರು:
ಸೃಜನ್.ಕೆ-618 (ಸುಧೀರ್ ಕೆ ಮತ್ತು ಸುಪ್ರಿಯ ಇವರ ಪುತ್ರ), ಹೆಚ್.ಎಸ್.ಶ್ರುತ ಜೈನ್-617 (ಹೆಚ್ ಶ್ರೇಯಾಂಸ ಕುಮಾರ್ ಇಂದ್ರ ಮತ್ತು ಶ್ವೇತ ಬಿ ಎಸ್ ಇವರ ಪುತ್ರಿ), ಎಂ.ವೈಷ್ಣವಿ-616 (ಲಕ್ಷ್ಮೀಶ ಮತ್ತು ರಾಧಿಕ ಎಂ ಇವರ ಪುತ್ರಿ) ಮಾನ್ವಿ.ವಿ-610(ವಿಶ್ವನಾಥ ಶೆಟ್ಟಿ ಮತ್ತು ಶಶಿಕಲಾ ಇವರ ಪುತ್ರಿ), ಎಂ.ಲಾಸ್ಯ-607 (ಪ್ರೇಮಚದ್ರ ಎಂ ಮತ್ತು ವಿ ಪ್ರತಿಮಾ ಇವರ ಪುತ್ರಿ) ಪ್ರಾಪ್ತಿ.ಪಿ-603 (ಪ್ರಭಾ ಚಂದ್ರ ಎಂ ಕೆ ಮತ್ತು ಉಮಾವತಿ ಇವರ ಪುತ್ರಿ), ಆಯಿಷತ್ ಹನ್ನಾ ಎ ಎ-592( ಅಬ್ದುಲ್ ರಹಿಮಾನ್ ಮತ್ತು ರೆಹಮತ್ ಇವರ ಪುತ್ರಿ), ಮಹಮ್ಮದ್ ಅವಾದ್ ಶಾ-590 ( ಎಂ ಅಶ್ರಫ್ ಮತ್ತು ಅಬ್ಸಾ ಕೆ ಇವರ ಪುತ್ರ), ವಿದಿಶಾ ಬಿ.ಕೆ-570 ( ಬಾಲಚಂದ್ರ ಕೆ ಮತ್ತು ಲೋಹಿತಾಕ್ಷಿ ಇವರ ಪುತ್ರಿ), ಶ್ರೀರಾಮ್ ಬೈಪಡಿತ್ತಾಯ-566 (ರಾಘವೇಂದ್ರ ಬೈಪಡಿತ್ತಾಯ ಮತ್ತು ಅನುಪಮ ಇವರ ಪುತ್ರ), ಬಿ.ವಿಘ್ನೇಶ್ ಶೆಟ್ಟಿ-559 (ಬಿ ಸಂಜೀವ ಶೆಟ್ಟಿ ಮತ್ತು ಬಿ, ದೇವಿ ಇವರ ಪುತ್ರ), ಸಾನ್ವಿ ಪಿ ಗೌಡ-552 (ಪ್ರದೀಪ್ ಕೆ ಸಿ ಮತ್ತು ಪ್ರತಿಮಾ ಎಂ ಎಸ್ ಇವರ ಪುತ್ರಿ), ಕಾವ್ಯಶ್ರೀ-550 (ದಿನೇಶ್ ಮತ್ತು ಗೀತಾ ಇವರ ಪುತ್ರಿ), ಹಸ್ತೇಶ್.ಪಿ ಶೆಟ್ಟಿ-537 (ತಾರಾನಾಥ ಮತ್ತು ಸೌಮ್ಯ ಇವರ ಪುತ್ರ) ಪ್ರಾರ್ಥನ್ ಪಿ-532 (ಪ್ರಭಾ ಚಂದ್ರ ಎಂ ಕೆ ಮತ್ತು ಉಮಾವತಿ ಇವರ ಪುತ್ರ), ಅಭಿಜ್ಞ-536 (ದಿ. ಮಾಧವ ಪಿ ಎಸ್ ಮತ್ತು ವನಿತಾ ಇವರ ಪುತ್ರಿ) ಸಾಧಕ ವಿದ್ಯಾರ್ಥಿಗಳನ್ನು ಮತ್ತು ಬೋಧಕ ವರ್ಗ ಹಾಗೂ ಸಿಬ್ಬಂದಿಗಳನ್ನು ಸಂಚಾಲಕ ಸವಣೂರು ಸೀತಾರಾಮ ರೈ ಕೆ., ಆಡಳಿತಾಧಿಕಾರಿ Adv.ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ತಿಳಿಸಿದ್ದಾರೆ.