ಪುತ್ತೂರಿನ ಸಂತ ಫಿಲೋಮಿನಾ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ತಂಡವು ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. M.Com, M.Scಮತ್ತು MSW ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಅಕ್ಷಯ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಮೆರೆದಿದ್ದಾರೆ.
ವಿದ್ಯಾರ್ಥಿಗಳ ಪ್ರಶಸ್ತಿಗಳ ವಿವರ ಹೀಗಿದೆ :
Canvas Expression: ದ್ವಿತೀಯ ಬಹುಮಾನ – ಮಧುಸೂದನ್ ಮತ್ತು ಸುಜನ್ (ಪ್ರಥಮ ಇಂಟೀರಿಯರ್ ಡೆಕೋರೆಷನ್),,The Search Begins: ದ್ವಿತೀಯ ಬಹುಮಾನ – ಪೃಥ್ವಿರಾಜ್, ಸೃಜನ್ ಮತ್ತು ದೀಪಕ್ (ದ್ವಿತೀಯ ಕಂಪ್ಯೂಟರ್ ಅಪ್ಲಿಕೇಷನ್),,Glamar Gala: ಪ್ರಥಮ ಬಹುಮಾನ – ಕವನ (ತೃತೀಯ B.Com), ವಿಂದ್ಯಾಶ್ರೀ (ದ್ವಿತೀಯB.Com),,Dice Race: ಪ್ರಥಮ ಬಹುಮಾನ – ಕೀರ್ತನ (ತೃತೀಯ ಇಂಟೀರಿಯರ್ ಡೆಕೋರೆಷನ್), ಕೀರ್ತನ ಕೃಷ್ಣ (ದ್ವಿತೀಯ ಕಂಪ್ಯೂಟರ್ ಅಪ್ಲಿಕೇಷನ್), ಜಿಗ್ನೆಸ್ (ಪ್ರಥಮ ಹಾಸ್ಪಿಟಾಲಿಟಿ ಸೈನ್ಸ್), ಉಜ್ವಲ್ ಮತ್ತು ಘನಶ್ಯಾಮ (ದ್ವಿತೀಯ B.Com),,ಸ್ವರ ಸಂಪದ: ಪ್ರಥಮ ಬಹುಮಾನ – ವಿಂದುಶ್ರೀ, ಶಮಿತಾ (ದ್ವಿತೀಯ B.Com), ದೇವಿಕಾ, ತ್ರಿಶಾ ಮತ್ತು ಮೋಕ್ಷ (ಪಕಳಕುಂಜ ಪ್ರಥಮ ಫ್ಯಾಷನ್ ಡಿಸೈನ್),,Dhrishyana: ಪ್ರಥಮ ಬಹುಮಾನ – ಆಕಾಶ್ (ದ್ವಿತೀಯ ಕಂಪ್ಯೂಟರ್ ಅಪ್ಲಿಕೇಷನ್), Riva Ayath: ಪ್ರಥಮ ಬಹುಮಾನ – ದೀಕ್ಷಾ (ತೃತೀಯ ಫ್ಯಾಷನ್ ಡಿಸೈನ್), ಹರ್ಷಿತ್ (ದ್ವಿತೀಯ ಇಂಟೀರಿಯರ್ ಡೆಕೋರೆಷನ್), PunarRoopam: ದ್ವಿತೀಯ ಬಹುಮಾನ – ರಾಕೇಶ್ ಮತ್ತು ಸೃಜನ್ (ದ್ವಿತೀಯ ಇಂಟೀರಿಯರ್ ಡೆಕೋರೆಷನ್) ವಿವಿಧ ವಿಭಾಗಗಳಲ್ಲಿ ತಮ್ಮ ಅನನ್ಯ ಪ್ರತಿಭೆ, ಶ್ರಮ ಮತ್ತು ಉತ್ಸಾಹದಿಂದ ಗಮನ ಸೆಳೆದ ಅಕ್ಷಯ ಕಾಲೇಜಿನ ತಂಡವು ಅಂತಿಮವಾಗಿ ಸ್ಪರ್ಧೆಯ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಭಾಜನವಾಗಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಸಾಧನೆಗೆ ವಿದ್ಯಾರ್ಥಿಗಳ ಪರಿಶ್ರಮದ ಜೊತೆಗೆ, ಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಅಧ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯ ನೆರವಿದೆ ಎಂಬುದಾಗಿ ಲಲಿತಾ ಕಲಾ ಸಂಘದ ಸಂಯೋಜಕರು ತಿಳಿಸಿದರು.