ಪುತ್ತೂರು: ಸಂಟ್ಯಾರ್ ಜಂಕ್ಷನ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್, ಮಾರುತಿ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ.
ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಟ್ಯಾರ್ ಜಂಕ್ಷನ್ ನಲ್ಲಿ ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುತ್ತಿದ್ದ ವೇಳೆ ಪಾಣಾಜೆ ಕಡೆಯಿಂದ ಬಂದ ಮಾರುತಿ (ಕೆಎಂ3ಎಂ.ಬಿ6672) ಎದುರಿನಿಂದ ಬಂದ ಸುಝುಕಿ ಎಕ್ಸಸ್(ಕೆಎ21 ಇಬಿ4576) ಡಿಕ್ಕಿ ಹೊಡೆದು ಎದುರಿನಿಂದ ಬಂದ ಬಜಾಜ್ ಪಲ್ಸರ್(ಕೆಎ21ವಿ5950) ಬೈಕ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಸುಝುಕಿ ಎಕ್ಸಸ್, ಪಲ್ಸರ್ ಬೈಕ್ ಹಾಗೂ ಮಾರುತಿ 800 ಜಖಂಗೊಂಡಿದ್ದು, ಅಪಘಾತದಿಂದ ಯಾವುದೇ ಗಾಯಗಳಾಗಿರುವುದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.