ಸುಳ್ಯ : ಸುಳ್ಯದ ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಹೊಳೆಗೆ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಏ.29 ರಂದು ಮಧ್ಯಾಹ್ನ ನಡೆದಿದೆ.
ಮೃತ ಮಹಿಳೆಯನ್ನು ದಿ. ಅಣ್ಣು ದಾಸ್ ಅವರ ಧರ್ಮ ಪತ್ನಿ ಯಶೋದ ದಾಸ್ (60) ಎಂದು ಗುರುತಿಸಲಾಗಿದೆ.
ಯಶೋದ ಅವರು ಕೆಲವು ವರ್ಷಗಳ ಹಿಂದೆ ಸ್ಪೋಕ್ ಮತ್ತು ಹೃದಯ ಖಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಅಪರೇಶನ್ ಮಾಡಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು. ಪುತ್ರನಲ್ಲಿ ಅಡುಗೆ ಮಾಡಲು ಕೋಳಿ ತರಲು ಹೇಳಿದ್ದರೆನ್ನಲಾಗಿದ್ದು, ಅವರು ಮಾರುಕಟ್ಟೆಗೆ ಹೋಗಿ ವಾಪಾಸ್ಸು ಬರುವಷ್ಟರಲ್ಲಿ ಯಶೋದ ಮನೆಯಲ್ಲಿ ಇರಲಿಲ್ಲ. ತಕ್ಷಣ ಅಕ್ಕ ಪಕ್ಕದವರ ಮನೆಯವರಿಗೆ ವಿಷಯವನ್ನು ತಿಳಿಸಿದ್ದು, ಹುಡುಕಾಡಿದಾಗ ಮನೆಯ ಪಕ್ಕದ ಹೊಳೆಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಸಂಪಾಜೆ ಪೋಲಿಸರು ಆಗಮಿಸಿ ತನಿಖೆ ನಡೆಸಿದ್ದಾರೆ.