ಕಾರಂತರು ಶಿಸ್ತು, ಸಮಯ ಪ್ರಜ್ಞೆಗೆ ಹೆಸರುವಾಸಿ : ಕೋಟ ಶ್ರೀನಿವಾಸ ಪೂಜಾರಿ | ವಿವೇಕಾನಂದ ಕಾಲೇಜಿನಲ್ಲಿ ವಿಚಾರ ಗೋಷ್ಠಿ

ಪುತ್ತೂರು: ಕಾರಂತರು ಒಂದು ತುಂಬಿದ ಕೊಡವಿದ್ದಂತೆ. ಅವರು ಎಂದೂ ಪ್ರಶಸ್ತಿಯ ಹಿಂದೆ ಹೋದವರಲ್ಲ. ಕಾರಂತರಲ್ಲಿ ಹಾಸ್ಯ ಪ್ರಜ್ಞೆಯೂ ಇತ್ತು. ಅವರು ಬಹಳ ನೇರವಾಗಿ ಮಾತನಾಡುವ ವ್ಯಕ್ತಿ. ಕಾರಂತರ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ತಿಳಿಸುವುದು ಅವಶ್ಯ ಎಂದು ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಮಂಗಳವಾರ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಮತ್ತು ಐಕ್ಯುಎಸಿ ಸಹಯೋಗದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆದ ವಿಚಾರಗೋಷ್ಠಿ ಮತ್ತು ಪಡೀಲು ಶಂಕರ ಭಟ್ಟ ಸಂಸ್ಮರಣಾ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ ಮಾತನಾಡಿ, ಕಾರಂತರು ಬಹು ಮುಖಿ ವ್ಯಕ್ತಿತ್ವದ ವ್ಯಕ್ತಿ. ಕಾರಂತರ ಬರಹ ನಮಗೆ ಚೈತನ್ಯವಿದ್ದಂತೆ. ಅವರ ಸ್ವಭಾವ ಬಹಳ ವಿಶಿ?ವಾದದ್ದು. ಕಾರಂತರು ಮಕ್ಕಳ ಶಿಕ್ಷಣವು ಅತ್ಯಂತ ಮುಕ್ತವಾಗಿ ಇರಬೇಕೆಂದು ಬಯಸಿದ್ದರು. ಕಟು ವಾಸ್ತವತಾವಾದಿಯಾಗಿ ಕೃತಿಗಳನ್ನು ರಚಿಸಿದ್ದರು. ಅವರೊಬ್ಬ ಸಾಮಾಜಿಕ ಮನೋಧರ್ಮವುಳ್ಳ ವ್ಯಕ್ತಿ ಎಂದರು.









https://screenapp.io/app/#/shared/8P4BcrrHNx























 
 

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲುರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರಂತರ ಬದುಕು ಬರಹಗಳು ನಮಗೆಲ್ಲ ಉತ್ತಮ ಸಂದೇಶ ನೀಡುತ್ತದೆ. ಅವರು ಭಾರತೀಯ ಪರಂಪರೆಯಲ್ಲಿ ಸಾರ್ವಜನಿಕ ಬದುಕು ಹೇಗಿರಬೇಕೆಂದು ತಿಳಿಸಿದ ಶ್ರೇ? ವ್ಯಕ್ತಿ. ಅವರ ಬದುಕು ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು.

ಬಳಿಕ ಪಡೀಲು ಶಂಕರಭಟ್ಟ ಸಂಸ್ಮರಣಾ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು. ಪ್ರಥಮ ಬಹುಮಾನವನ್ನು ಕೆಎಲ್‌ಇ ಸೊಸೈಟಿಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜು ರಾಣಿಬೆನ್ನೂರುನ ಪ್ರಥಮ ಬಿಎ ವಿದ್ಯಾರ್ಥಿನಿ ಅನು? ಎಸ್. ಕೋಗಳೆ ಹಾಗೂ ದ್ವಿತೀಯ ಬಹುಮಾನವನ್ನು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪದ್ಮಶ್ರೀ ಎಸ್. ಪಿ ಮತ್ತು ತೃತೀಯ ಬಹುಮಾನವನ್ನು ಬೆಂಗಳೂರು ಚಾಣಕ್ಯ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿಯ ಕುಸುಮ ಸಿ.ಎಂ ಪಡೆಕೊಂಡರು.

ಬಳಿಕ ಚೋಮನ ದುಡಿ ಚಿತ್ರದಲ್ಲಿ ನಟರಾಗಿ ಭಾಗವಹಿಸಿದ ಕಲಾವಿದರೊಂದಿಗೆ ಸಂವಾದ ಮತ್ತು ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಾಯಿತು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃ? ಕೆ. ಎನ್, ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಪ್ರಮೋದ್ ಎಂ.ಜಿ, ಪ್ರಿನ್ಸಿಪಾಲ್ ಪ್ರೊ.ವಿ? ಗಣಪತಿ ಭಟ್ ಉಪಸ್ಥಿತರಿದ್ದರು.

ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ ವಿಜಯ ಸರಸ್ವತಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್. ವಂದಿಸಿದರು. ವಿದ್ಯಾರ್ಥಿನಿ ಚೈತನ್ಯ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top