ಸಸಿಹಿತ್ತಿಲು ದೊಡ್ಡಮನೆ ಶ್ರೀಧರ ಅಮೀನ್ ಗೃಹಪ್ರವೇಶದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಶ್ರೀ ಶನೀಶ್ವರ ಮಹಾತ್ಮೆ ತಾಳಮದ್ದಳೆ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ನಿತೇಶ್ ಕುಮಾರ್. ವೈ, ಸಂತೋಷ್ ಕುಮಾರ್ ಹರಿಹರ, ಹಿಮ್ಮೇಳದಲ್ಲಿ ದೇವಿಪ್ರಸಾದ್ ಕಟೀಲು, ಎಸ್ ಎನ್ ಭಟ್ ಬಾಯಾರು, ರಘುಪತಿ ಭಟ್ ಸಸಿಹಿತ್ತಿಲು, ಅರ್ಥದಾರಿಗಳಾಗಿ ಗುಡ್ಡಪ್ಪ ಬಲ್ಯ, ಗೀತಾ ಕರಾಯ (ವಿಕ್ರಮಾದಿತ್ಯ,) ದಿವಾಕರ ಆಚಾರ್ಯ ಗೇರುಕಟ್ಟೆ (ವಿಭಾಕರ), ಹರೀಶ ಆಚಾರ್ಯ ಬಾರ್ಯ(ಆಸ್ಥಾನ ವಿದ್ವಾಂಸ), ಆಶಾಲತಾ ರಾಮಕುಂಜ(ಶನೀಶ್ವರ), ಜಿನೇಂದ್ರ ಜೈನ್ ಬಳ್ಳಮಂಜ(ಕುದುರೆ ವ್ಯಾಪಾರಿ, ಬೇತಾಳ), ಸತೀಶ್ ಶಿರ್ಲಾಲ್ (ನಂದಿ ಶೆಟ್ಟಿ), ಪಾತಾಳ ಅಂಬಾ ಪ್ರಸಾದ್ (ಅಲೋಲಿಕೆ, ರಾಮ ಗಾಣಿಗ), ಶ್ರೀಧರ ಎಸ್ಪಿ ಸುರತ್ಕಲ್ (ಚಂದ್ರಸೇನ), ಗೀತಾ ಕುದ್ದಣ್ಣಾಯ(ಸುಶೀಲೆ), ಶ್ರುತಿ ವಿಸ್ಮಿತ್ ( ಝಂಡಾಸುರ ಮತ್ತು ಪದ್ಮಾವತಿ ) ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ವಾದಿರಾಜ ಉಪಾಧ್ಯಾಯ ಕಿಲ್ಪಾಡಿ, ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕರಾದ ಶ್ರೀ ನರಸಿಂಹ ಭಟ್ ಮತ್ತು ಪ್ರಸಾದ್ ಭಟ್ ಇವರುಗಳು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸಿದರು.
ಉಪ್ಪಿನಂಗಡಿ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ಈ ಕಾರ್ಯಕ್ರಮವನ್ನು ಶ್ರೀಧರ ಎಸ್ ಪಿ ಸಂಯೋಜಿಸಿದ್ದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀಮತಿ ಶ್ವೇತಾ ಪಳ್ಳಿ ಸಂಘದ ಕಲಾವಿದರನ್ನು ಗೌರವಿಸಿದರು. ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.