ಬಂಟ್ವಾಳ: ತಾಲೂಕಿನ ಬರಿಮಾರು ಕರ್ತಕೋಡಿ ಧನ್ಯತಾ ಸಾಲ್ಯಾನ್ ಕುಟುಂಬಸ್ಥರ ದೈವಗಳ ಗಗ್ಗರ ಸೇವೆ ಶುಕ್ರವಾರ ರಾತ್ರಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಶುಕ್ರವಾರ ಬೆಳಿಗ್ಗೆ ಗಣಹೋಮ, ನಾಗತಂಬಿಲ, ಮುಡಿಪು ಕಟ್ಟುವುದು, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಂಜೆ 5 ಗಂಟೆಗೆ ಭಂಡಾರ ಇಳಿದು ರಾತ್ರಿ ಅನ್ನಸಂತರ್ಪಣೆ ಜರಗಿತು. ಬಳಿಕ ಸತ್ಯದೇವತೆ ಕಲ್ಲುರ್ಟಿ ಪಂಜುರ್ಲಿ, ಚಾಮುಂಡಿ-ಗುಳಿಗ ರಾಹು-ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಧನ್ಯತಾ ಸಾಲ್ಯಾನ್ ಕುಟುಂಬಸ್ಥರು, ಸ್ಥಳೀಯರು ಉಪಸ್ಥಿತರಿದ್ದರು.

ಇಂದು ರಾತ್ರಿ ದೈವಗಳಿಗೆ ವರ್ಷಾವಧಿ ಅಗೇಲು ಸೇವೆ ನಡೆಯಲಿದೆ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.