ಪುತ್ತೂರು – ಉಪ್ಪಿನಂಗಡಿ ರಸ್ತೆಯ ಪಡೀಲಿನಲ್ಲಿರುವ ಬಾಳಪ್ಪ ಕಾಂಪ್ಲೆಕ್ಸ್’ನಲ್ಲಿ ಎಸ್.ಆರ್. ಹಾರ್ಡ್’ವೇರ್ ಉದ್ಯಮ ನಡೆಸುತ್ತಿದ್ದ ಸೀತಾರಾಮ ಪಟ್ಟೆಯವರು ಇಂದು ಮುಂಜಾನೆ 5.30ಕ್ಕೆ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈಚೆಗೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಶೋಭಾ ಮತ್ತು ಅಂಬಿಕಾ ಸೆಂಟ್ರಲ್ ಸ್ಕೂಲ್’ನಲ್ಲಿ 10ನೆ ತರಗತಿ ವ್ಯಾಸಂಗ ಮಾಡುತ್ತಿರುವ ಮಗಳು ಮನಸ್ವಿ ಮತ್ತು 6ನೆ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರನ್ನು ಅಗಲಿದ್ದಾರೆ.
ಸೀತಾರಾಮ ಅವರು ಪಡೀಲ್’ನಲ್ಲಿರುವ ‘ಸಮೃದ್ಧಿ ಕಾಂಪ್ಲೆಕ್ಸ್’ನ ಮಾಲಕರು ಆಗಿದ್ದರು. ಪುಟ್ಟದೊಂದು ಸರಕು ಸಾಗಣೆಯ ವಾಹನವನ್ನು ಸ್ವತಃ ಚಲಾಯಿಸಿಕೊಂಡು ತನ್ನ ಉದ್ಯಮದಲ್ಲಿ ಕಠಿಣ ಪರಿಶ್ರಮಿಯಾಗಿದ್ದ ಅವರಿಗೆ ಪತ್ನಿ ಶೋಭಾ ದುಡಿಮೆಯಲ್ಲಿಯೂ ನೈಜ ಸಂಗಾತಿಯಾಗಿದ್ದರು. ಇಂದು ಅನೇಕ ಬಂಧು, ಮಿತ್ರರನ್ನು ಅಗಲಿದ ಅವರ ಆತ್ಮಕ್ಕೆ ನ್ಯೂಸ್ ಪುತ್ತೂರು ಚಿರಾಶಾಂತಿಯನ್ನು ಕೋರುತ್ತಾ ಅವರಾತ್ಮ ಭಗವಂತನಲ್ಲಿ ಲೀನವಾಗಲೆಂದು ಪ್ರಾರ್ಥಿಸುತ್ತದೆ.
ಜನಾನುರಾಗಿ, ಮೃದುಭಾಷಿ
ಅಗಲಿದ ಸೀತಾರಾಮ ಅವರು ಸರಳ, ಸಜ್ಜನರಾಗಿದ್ದು ಮೃದುಭಾಷಿಯಾಗಿದ್ದರು. ಸ್ಥಳೀಯ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಕೊಂಡು ಜನಾನುರಾಗಿಯಾಗಿದ್ದರು.
ದೇಹದ ಆಗಮನ
ಇಂದು ಮುಂಜಾನೆ 9.30ಕ್ಕೆ ಅವರ ದೇಹ ಬನ್ನೂರಿನ ಸರ್ವಶ್ರೀ ವೃತ್ತದ ಬಳಿಯ ‘ಎಸ್.ಆರ್. ಕಾಂಪೌಂಡ್’ಗೆ ಆಗಮಿಸಲಿದೆ. ಬಳಿಕ ಆಲಂಗಾರಿಗೆ ಸಾಗಲಿದೆ ಎಂದು ಅವರ ಬಂಧು ಎ.ವಿ. ನಾರಾಯಣ ಮಾಹಿತಿ ನೀಡಿದ್ದಾರೆ.