ಏ.26 : ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆ | ಸಹಕಾರ ಭಾರತೀಯ ಅಭ್ಯರ್ಥಿಗಳು ಎಲ್ಲಾ 16 ಸ್ಥಾನಗಳಲ್ಲೂ ಅಭೂತಪೂರ್ವ ಗೆಲುವು : ನಾರಾಯಣ ಪ್ರಕಾಶ್‍

ಪುತ್ತೂರು: ಮಂಗಳೂರು ಕುಲಶೇಖರದಲ್ಲಿ ಎ.26  ರಂದು ನಡೆಯುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳು ಎಲ್ಲಾ 16 ಸ್ಥಾನಗಳಲ್ಲೂ ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಕಾಶ್ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಹಕಾರ ಭಾರತಿ ಸಹಕಾರ ಕ್ಷೇತ್ರದಲ್ಲಿ ಏಕೈಕ ರಾಷ್ಟ್ರಮಟ್ಟದ ಸಂಘಟನೆಯಾಗಿದ್ದು, ಸಹಕಾರಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟನಾತ್ಮಕವಾಗಿ, ರಚನಾತ್ಮಕವಾಗಿ ಅಯೋಜನಾತ್ಮಕವಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಹೈನುಗಾರರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಸ್ಪಂದಿಸುತ್ತಾ ಕಾಲಕಾಲಕ್ಕೆ ಸರಕಾರವನ್ನು ಎಚ್ಚರಿಸುತ್ತಾ ಬರುತ್ತಿದೆ ಎಂದರು.
ಬಿಜೆಪಿ ಬೆಂಬಲಿತ ಸಹಕಾರ ಭಾರತೀ ಅಭ್ಯರ್ಥಿಗಳು ಎಲ್ಲಾ 16 ಸ್ಥಾನಗಳಲ್ಲೂ ಸ್ಪರ್ಧಿಸುತ್ತಿದ್ದಾರೆ. ಪುತ್ತೂರು ಉಪವಿಭಾಗದಿಂದ ಎಸ್.ಬಿ. ಜಯರಾಮ ರೈ, ಚಂದ್ರಶೇಖರ್ ನಿಧಿಮುಂಡ, ಬೆಳ್ತಂಗಡಿಯ ಪ್ರಭಾಕರ್, ಸುಳ್ಯದ ಭರತ್ ನೆಕ್ರಾಜೆ, ಮಹಿಳಾ ಕ್ಷೇತ್ರದಿಂದ ಬಂಟ್ವಾಳದ ಸವಿತಾ ಸ್ಪರ್ಧಿಸುತ್ತಿದ್ದಾರೆ ಎಂದರು.
ಶೇ.98 ಸ. ಹಾ. ಉತ್ಪಾದಕ ಸಂಘಗಳಲ್ಲಿ ಪೂರಕ ಸಾಫ್ಟ್‍ವೇರ್‌ ಗಳನ್ನು ಅಳವಡಿಸಿಕೊಂಡು ಡಿಜಿಟಲೈಸ್ ಮಾಡಲಾಗಿದೆ. ಸುಮಾರು 70 ಸಾವಿರ ಕುಟುಂಬಗಳು ಹಾಲು ಉತ್ಪಾದನೆಯ ಮೂಲಕ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಜಾನುವಾರುಗಳಿಗೆ ಹಸಿರು ಹುಲ್ಲಿನ ಕ್ಷಾಮ ಇದೆ. ಈ ಕಾರಣದಿಂದ ತಿಂಗಳಿಗೆ ಒಂದು ಸಾವಿರ ಟನ್ ಸೈಲಜ್‌ ನ್ನು ಕೆ.ಜಿಗೆ. 7.50 ದರದಲ್ಲಿ ಹೈನುಗಾರರಿಗೆ ಪೂರೈಕೆ ಮಾಡಲಾಗುತ್ತಿದೆ. ಒಂದು ಫ್ಯಾಟ್‌ಗೆ 16 ಪೈಸೆಯನ್ನು ಹೆಚ್ಚುವರಿ ನೀಡಲಾಗುತ್ತಿದೆ. ಒಕ್ಕೂಟವು ಸುಮಾರು 12 ಕೋಟಿಯಷ್ಟು ಲಾಭದಲ್ಲಿ ಮುನ್ನಡೆಯುತ್ತಿದೆ ಎಂದರು.
ಈಗಾಗಲೇ ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟಂತೆ ಪುತ್ತೂರಿನಲ್ಲಿ ಬೃಹತ್ತಾದ ಅಂದಾಜು 70 ಕೋಟಿಯ ಡೈರಿ ಪ್ಲಾಂಟನ್ನು ಮಾಡಬೇಕೆಂಬ ಯೋಜನೆಯಡಿಯಲ್ಲಿ ಚಿಕ್ಕಮುಡ್ನೂರಿನಲ್ಲಿ 10 ಎಕರೆ ಜಾಗವನ್ನು ಸರಕಾರಕ್ಕೆ ಹಣ ಸಂದಾಯ ಮಾಡಿ ಖರೀದಿಸಲಾಗಿದೆ. ಅಲ್ಲದೆ ಅದರ ಸರಹದ್ದಿನಲ್ಲಿರುವ 4 ಎಕರೆ ಖಾಸಗಿ ಜಾಗವನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಸುಮಾರು 60 ಎಕ್ರೆ ಜಾಗವನ್ನು ಟಿ.ಎಂ.ಆರ್. (ಟೋಟಲ್ ಮಿಲ್ಕ್ ರೇಶಿಯೋ ಪ್ಲಾöಟ್ ನಿರ್ಮಾಣಕ್ಕಾಗಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಸದ್ಯಕ್ಕೆ ಈ ಪ್ಲಾಂಟ್ ಆಂಧ್ರಪ್ರದೇಶದಲ್ಲಿ ಮಾತ್ರವಿದೆ. ಮುಂದಿನ ಅವಧಿಯಲ್ಲಿ ಹಲವು ಯೋಜಿತ ಅಭಿವೃದ್ಧಿಯನ್ನು ಮುಂದುವರಿಸಲು ಅಮೂಲ್ಯವಾದ ಮತವನ್ನು ಕೊಟ್ಟು ಆಶೀರ್ವದಿಸಬೇಕಾಗಿ ನಾರಾಯಣ ಪ್ರಕಾಶ್ ವಿನಂತಿಸಿದರು.





























 
 

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ತಾಲೂಕು ಸಹಕಾರ ಭಾರತೀ ಅಧ್ಯಕ್ಷ ಕೃಷ್ಣಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಮೋಹನ್ ಕುಂಡಾಪು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರು, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು. 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top