ಪುತ್ತೂರು : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿಏ. 22ಮಂಗಳವಾರದಂದು ಸಂಜೆ 6:30 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ” ಗಿರಿಜಾ ಕಲ್ಯಾಣ” ಎಂಬ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ . ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಹಿಮ್ಮೇಳದಲ್ಲಿ – ಭಾಗವತರು : ಅಮೃತಾ ಕೌಶಿಕ್ ರಾವ್ , ಮುರಾರಿ ಭಟ್ ಪಂಜಿಗದ್ದೆ. ಚೆಂಡೆ ಮದ್ದಳೆ ವಾದಕರಾಗಿ : ಗಿರೀಶ್ ಕಿನಿಲಕೋಡಿ, ಜಯಪ್ರಕಾಶ್ ನಾಕೂರು, ಮುರಳೀಧರ ಬಟ್ಯಮೂಲೆ. ಮುಮ್ಮೇಳದಲ್ಲಿ : ಗುಂಡ್ಯಡ್ಕ ಈಶ್ವರ ಭಟ್ , ರವಿ ಭಟ್, ಬಾಲಕೃಷ್ಣ ಸೀತಂಗೋಳಿ, ಪ್ರಶಾಂತ್ ಮುಂಡ್ಕೂರ್, ನವೀನಚಂದ್ರ, ಶ್ರೀಶ ಮಣಿಲ, ರಮೇಶ್ ಕಜೆ (ಹಾಸ್ಯ ಪಾತ್ರದಲ್ಲಿ ), ಕಿಶನ್ ಅಗ್ಗಿತ್ತಾಯ, ತೃಷಾಲ್ ಗೌಡ, ಜೀವನ್ ಆಚಾರ್ಯ, ಕುಮಾರಿ ಸ್ತುತಿ ಕುಲಾಲ್, ಕುಮಾರಿ ಭೂಮಿಕಾ ಆಚಾರ್ಯ, ಸಂಯೋಜನೆ : ಗಿರೀಶ್ ಕಿನಿಲಕೋಡಿ, ವೇಷಭೂಷಣ :ದೇವಕಾನ ಬಳಗ ಸಹಕರಿಸಲಿದ್ದಾರೆ.