ಮಂಗಳೂರು ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಕಳ್ಳ ಸಾಗಾಟದ ಚಿನ್ನದ ಲಾಭ ಹಂಚಿಕೊಳ್ಳುವ ತಕರಾರಿನ ಹಿನ್ನೆಲೆಯಲ್ಲಿ ಮಾಡಿದ್ದ ಹತ್ಯೆ

ಮಂಗಳೂರು: ವಿದೇಶದಿಂದ ಕಳ್ಳ ಮಾರ್ಗದಲ್ಲಿ ತಂದ ಚಿನ್ನದ ಲಾಭವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಉಂಟಾದ ತಕರಾರಿನ ನಗರದ ಅತ್ತಾವರದಲ್ಲಿ 2014ರಲ್ಲಿ ಸಂಭವಿಸಿದ್ದ ಜೋಡಿ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೇರಳ ಕಾಸರಗೋಡಿನ ಚೆರ್ಕಳ ಎಂಬಲ್ಲಿನ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರದ ಇರ್ಷಾದ್ (24) ಹಾಗೂ

ಸಫ್ವಾನ್ (24) ಶಿಕ್ಷೆಗೊಳಗಾದ ಆರೋಪಿಗಳು. ಇವರು ನಾಫೀರ್ ಮತ್ತು ಫಾಹಿಮ್ ಎಂಬವರನ್ನು ಕೊಲೆಗೈದಿದ್ದರು.
ನಾಫೀರ್ ಮತ್ತು ಫಾಹಿಮ್ ಗೆಳೆಯರಾಗಿದ್ದರು. ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ತಂದಿದ್ದ. ಅವುಗಳನ್ನು ಮಾರಾಟ ಮಾಡಲು ಮೂವರು ಆರೋಪಿಗಳು ಸಹಕರಿಸಿದ್ದರು. ಚಿನ್ನ ಮಾರಾಟ ಮಾಡಿ ಬಂದ ಹಣದ ವಿಚಾರದಲ್ಲಿ ನಫೀರ್ ಮತ್ತು ಫಾಹಿಮ್ ತಕರಾರು ಮಾಡಿದರು ಎಂಬ ದ್ವೇಷದಿಂದ ಮೂವರು ಆರೋಪಿಗಳು ಸೇರಿ 2014ರ ಜು.1ರಂದು ಕೊಲೆ ಮಾಡಿದ್ದರು.





























 
 

ಕೊಲೆ ಮಾಡಿ ಶವಗಳನ್ನು ಹೂತು ಹಾಕುವ ಉದ್ದೇಶದಿಂದ ಆರೋಪಿಗಳು ಕಾಸರಗೋಡಿನ ಬೇಡಡ್ಕ ಎಂಬಲ್ಲಿ 10 ಸೆಂಟ್ಸ್ ಜಾಗವನ್ನು 2014ರ ಮೇ 15ರಂದು ಖರೀದಿಸಿದ್ದರು. 3ನೇ ಆರೋಪಿ ಸಫ್ವಾನ್ ಹೆಸರಿಗೆ ಈ ಜಮೀನನ್ನು ನೋದಣಿ ಮಾಡಿಸಿಕೊಂಡಿದ್ದರು. ಶವ ಹೂಳಲು ದೊಡ್ಡ ಹೊಂಡವನ್ನೂ ಕೂಡ ತೆಗೆದಿಟ್ಟಿದ್ದರು. ಜೂ.16ರಂದು ಮೂವರು ಆರೋಪಿಗಳು ಆರೋಪಿಗಳು ನಗರದ ಅತ್ತಾವರದ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದರು. ಮರುದಿನ ನಫೀರ್ ಮತ್ತು ಫಾಹಿಮ್ ರನ್ನು ಅಲ್ಲಿಗೆ ಕರೆದೊಯ್ದು ಅವರೊಂದಿಗೆ ಗೆಳೆತನದ ನಾಟಕವಾಡಿ ವಾಸಿಸತೊಡಗಿದ್ದರು. 2014ರ ಜು.1ರಂದು ಮೂವರು ಸೇರಿ ಇಬ್ಬರನ್ನೂ ಕೊಲೆ ಮಾಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top