ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಧ್ವಜಾವರೋಹಣದೊಂದಿಗೆ ಶನಿವಾರ ಬೆಳಿಗ್ಗೆ ಸಂಪನ್ನಗೊಂಡಿತು.
ಶುಕ್ರವಾರ ಸಂಜೆ ಶ್ರೀ ದೇವರು ದೂರದ ವೀರಮಂಗಲಕ್ಕೆ ಅವಭೃತ ಸವಾರಿ ನಡೆಸಿ ಶನಿವಾರ ಮುಂಜಾನೆ ತಲುಪಿ ವೀರಮಂಗಲ ಶ್ರಿ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಇರುವ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನ ಮುಗಿಸಿದರು. ಬಳಿಕ ಸುಮಾರು 11 ಗಂಟೆಗೆ ಶ್ರೀ ದೇವರು ದೇವಸ್ಥಾನ ತಲುಪಿ ಬಳಿಕ ಗರ್ಭಗುಡಿ ಪ್ರವೇಶಿಸಿ ಪೂಜೆ ನಡೆದ ಬಳಿಕ ಸಹಸ್ರಾರು ಭಕ್ತಾದಿಗಳ ಜಯಘೋಷಗಳೊಂದಿಗೆ ಧ್ವಜಾವರೋಹಣ ನಡೆಯಿತು.
ಇಂದು ರಾತ್ರಿ ಶ್ರೀ ದೇವಸ್ಥಾನದಲ್ಲಿ ಪಿಲಿಭೂತ, ರಕ್ತೇಶ್ವರಿ ನೇಮೋತ್ಸವ ನಡೆಯಲಿದೆ.