ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸವಾರಿ ಶನಿವಾರ ಮುಂಜಾನೆ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಇರುವ ಕುಮಾರಧಾರ ನದಿಯಲ್ಲಿ ಶನಿವಾರ ಶುಕ್ರವಾರ ಮುಂಜಾನೆ ಅವಭೃತ ಸ್ನಾನ ಮುಗಿಸಿದರು.
ಶುಕ್ರವಾರ ಸಂಜೆ ಶ್ರೀ ದೇವರ ಬಲಿ ಉತ್ಸವ ನಡೆದು ಬಳಿಕ ರಕ್ತೇಶ್ವರಿ ದೈವಗಳೊಂದಿಗೆ ನುಡಿಗಟ್ಟು ನಡೆದು ಬಳಿಕ ರಥಬೀದಿಯಿಂದ ಅವಭೃತ ಸವಾರಿಗೆ ಹೊರಟರು. ಶ್ರೀ ದೇವರೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ತೆರಳಿದರು. ದಾರಿಯುದ್ದಕ್ಕೂ ಸುಮಾರು 54 ಕಟ್ಟೆಗಳಲ್ಲಿ ಶ್ರೀ ದೇವರು ಪೂಜೆಗೊಂಡು ಶನಿವಾರ ಮುಂಜಾನೆ ವೀರಮಂಗಲವನ್ನು ತಲುಪಿದರು. ಅಲ್ಲಿಯ ಆರಾಟ ಕಟ್ಟೆಯಲ್ಲಿ ಕೊನೆಯ ಪೂಜೆ ನಡೆದ ಬಳಿಕ ಅಲ್ಲಿಂದ ಉತ್ಸವ ಮೂರ್ತಿಯೊಂದಿಗೆ ಪುನಃ ಶ್ರೀ ದೇವಸ್ಥಾನಕ್ಕೆ ಆಗಮಿಸಿದರು.
ದಾರಿಯುದ್ದಕ್ಕೂ ಇರುವ ಕಟ್ಟೆಗಳನ್ನು ತಳಿರು ತೋರಣ, ಕೇಸರಿ ಬಂಟಿಗ್ಸ್ ಗಳಿಂದ ಸಿಂಗರಿಸಲಾಗಿತ್ತು. ಕೆಲವು ಕಡೆಗಳಲ್ಲಿ ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.