ಪುತ್ತೂರು: ವಕ್ಫ್ ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಯುವ ಅಡ್ಯಾರು ಪ್ರದೇಶದಲ್ಲಿ ಹಿಂದೂ ಧಾರ್ಮಿಕ ನೇಮೋತ್ಸವಕ್ಕೆ ಹಾಕಲಾದ ಪತಾಕೆ ಬಂಟಿಂಗ್ ಗಳನ್ನು ತೆಗೆಯುವ ಪೊಲೀಸರ ಆದೇಶಕ್ಕೆ ಮತ್ತು ಪುತ್ತೂರು ಶಾಸಕರಿಂದ ವಕ್ಫ್ ಪರ ಹೇಳಿಕೆಗೆ ಅರುಣ್ ಕುಮಾರ್ ಪುತ್ತಿಲ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎ.18ರಂದು ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಂತಾಗಿದೆ. ವಕ್ಫ್ ಪ್ರತಿಭಟನೆ ನೆಪದಲ್ಲಿ ನೇಮೋತ್ಸವಕ್ಕೆ ಹಾಕಿದ ಕೇಸರಿ ಧ್ವಜ, ಬಂಟಿಂಗ್ ಯಾಕೆ ತೆಗೆಯಲಾಗುತ್ತಿದೆ. ಇಂತಹ ನೀಚ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಸರ್ಕಾರಿ ಪ್ರಾಯೋಜಿತ ವಕ್ಫ್ ಪ್ರತಿಭಟನೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಏಕಮುಖ ಸಂಚಾರದ ತೀರ್ಮಾನವೂ ಒಪ್ಪ ತಕ್ಕದ್ದಲ್ಲ. ಇವರ ಪ್ರತಿಭಟನೆ ಸರಕಾರದ ವಿರುದ್ದವೋ, ಅಥವಾ ಹಿಂದುಗಳ ವಿರುದ್ಧವೋ ? ಹಿಂದುಗಳಿಗೆ ಅವರ ನೇಮೋತ್ಸವ, ಧಾರ್ಮಿಕ ಆಚರಣೆ ಮಾಡಲು ಅವಕಾಶ ನೀಡಿ, ಯಾವುದಕ್ಕೂ ಅಡ್ಡಿ ಬೇಡ ಎಂದು ಆಗ್ರಹಿಸಿದ್ದಾರೆ.
ನಾಳೆ ಪ್ರತಿಭಟನೆಯ ನಂತರ ಹಿಂದೂಗಳ ಧಾರ್ಮಿಕ ಕೇಂದ್ರ, ಆಸ್ತಿ ಪಾಸ್ತಿ, ಜನತೆಗೆ ಹಾಗು ಕಾರ್ಯಕರ್ತರಿಗೆ ತೊಂದರೆ ಆದರೆ ಹಿಂದೂ ಸಮಾಜವು ತಕ್ಷಣ ಪ್ರತಿಕ್ರಿಯೆ ನೀಡಲಿದೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡುತ್ತಿದ್ದೆವೆ. ಪ್ರವಾಸೋದ್ಯಮ ಬೆಳೆಯಬೇಕೆಂದು ಅಧಿವೇಶನದಲ್ಲಿ ಮಾತನಾಡಿ ಸರ್ಕಾರ ಈ ರೀತಿಯ ಪ್ರತಿಭಟನೆಗೆ ತುರ್ತುಪರಿಸ್ಥಿತಿ ಘೋಷಣೆ ಮಾಡಿದ ರೀತಿ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತು ಮಾಡಿ ಮುಂದಾಗುವ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ರೈ ಹೇಳಿಕೆಗೆ ಖಂಡನೆ :
ಕೇಂದ್ರ ಸರ್ಕಾರ ವಕ್ಫ್ ಮಸೂದೆ ತಿದ್ದುಪಡಿಗೊಳಿಸಿದ್ದನ್ನು ರಾಜ್ಯದಲ್ಲಿ ಪಾಲಿಸುವುದಿಲ್ಲ ಎಂಬ ಪುತ್ತೂರು ಶಾಸಕ ಅಶೋಕ್ ರೈ ಹೇಳಿಕೆ ಖಂಡನೀಯ. ತಮಿಳುನಾಡು ಹಾಗೂ ಮತ್ತಿತ್ತರ ಕಡೆ ದೇವಸ್ಥಾನ ಸಮೇತ ಇಡೀ ಗ್ರಾಮವನ್ನೇ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದ್ದು ಶಾಸಕರಿಗೆ ತಿಳಿದಿಲ್ಲದಿದ್ದರೆ ಸ್ವಲ್ಪ ಅರಿತುಕೊಳ್ಳಲಿ ಎಂದರು. ಒಬ್ಬ ಹಿಂದೂವಾಗಿ ಈ ರೀತಿ ಬೆಂಬಲ ಸೂಚಿಸುವುದು ಖಂಡನೀಯ ಎಂದು ಅರುಣ್ ಪುತ್ತಿಲ ತಿಳಿಸಿದ್ದಾರೆ.