ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಭಂಡಾರ ದೇವಸ್ಥಾನಕ್ಕೆ ಇಂದು ರಾತ್ರಿ ಆಗಮಿಸಲಿದೆ.
ಕಿರುವಾಳು ಆಗಮನದ ಅಂಗವಾಗಿ ಇಂದು ಬೆಳಿಗ್ಗೆಯಿಂದಲೇ ಶ್ರೀ ಉಳ್ಳಾಲ್ತಿಗೆ ಮಲ್ಲಿಗೆ ಅರ್ಪಿಸಲು ಅವಕಾಶ ನೀಡಲಾಗಿತ್ತು. ಇದಕ್ಕೂ ಮುಂಚೆ ಶ್ರೀ ದೈವಸ್ಥಾನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಹಾಗೂ ಸಂಜೆ 3 ಗಂಟೆ ತನಕ ಮಲ್ಲಿಗೆ ಅರ್ಪಿಸಲು ಅವಕಾಶ ನೀಡಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕಟ್ಟೆಯಲ್ಲಿ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಮಲ್ಲಿಗೆ ಅರ್ಪಿಸಲಿದ್ದಾರೆ.