ಮಂಗಳೂರು-ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು : ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ನೈರುತ್ಯ ರೈಲ್ವೆ ಕೆಲವು ವಿಶೇಷ ರೈಲುಗಳನ್ನು ಓಡಿಸಲಿದೆ. ಈ ಪೈಕಿ ಒಂದು ರೈಲು ಬೆಂಗಳೂರು-ಮಂಗಳೂರು ನಡುವೆ ಸಂಚರಿಸಲಿದೆ.

ರೈಲು ಸಂಖ್ಯೆ 06579 ಏಪ್ರಿಲ್ 17ರಂದು ರಾತ್ರಿ 11.55ಕ್ಕೆ ಬೆಂಗಳೂರಿನಿಂದ (ಎಸ್​ಎಂವಿಟಿ) ಹೊರಟು ಮರುದಿನ ಸಂಜೆ 4 ಗಂಟೆಗೆ ಮಂಗಳೂರು ಜಂಕ್ಷನ್ ತಲುಪುತ್ತದೆ.

ರೈಲು ಸಂಖ್ಯೆ 06580 ಏಪ್ರಿಲ್ 20ರಂದು ಮಧ್ಯಾಹ್ನ 2.10ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಿಗ್ಗೆ 7.30ಕ್ಕೆ ಬೆಂಗಳೂರು (ಎಸ್​ಎಂವಿಟಿ) ತಲುಪುತ್ತದೆ.
1 ಪ್ರಥಮ ದರ್ಜೆ ಎಸಿ ಕೋಚ್, 2 ಎಸಿ ಟೂ-ಟೈರ್ ಕೋಚ್‌ಗಳು, 4 ಎಸಿ ತ್ರೀ-ಟೈರ್ ಕೋಚ್‌ಗಳು, 7 ಸ್ಲೀಪರ್ ಕ್ಲಾಸ್ ಕೋಚ್‌ಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಕೋಚ್‌ಗಳು ಮತ್ತು 2 ಸಾಮಾನ್ಯ ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್​​ ಕೋಚ್‌ಗಳನ್ನು ಈ ರೈಲು ಹೊಂದಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top