ಪುತ್ತೂರು: ಕಬಕ ಗ್ರಾಮ ಪಂಚಾಯತ್ ನ ಮುರ ಎಂಬಲ್ಲಿ ವಾಸವಾಗಿರುವ ಅನಾರೋಗ್ಯ ಪೀಡಿತೆ ಸೀತಾ ಎಂಬವರನ್ನು ಸಮಾಜ ಸೇವಕರಾದ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಉಮೇಶ್ ನಾಯಕ್, ಎವಿಜಿ ಅಸೋಸಿಯೇಟ್ ಇದರ ಮಾಲಕರಾದ ಎ.ವಿ. ನಾರಾಯಣ ಪುತ್ತೂರು ಮತ್ತು ಮೋಹನ್ ಕಬಕ ಅವರ ಸಂಪೂರ್ಣ ಸಹಕಾರದೊಂದಿಗೆ ಆಶ್ರಮಕ್ಕೆ ಸೇರಿಸಲಾಯಿತು.
ಕಳೆದ ಏಳು ತಿಂಗಳಿಂದ ಅನಾರೋಗ್ಯ ಪೀಡಿತರಾಗಿ ಪುತ್ತೂರು ಸರಕಾರಿ ಆಸ್ಪತ್ರೆ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಸೀತಾ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಮುಂದಿನ ಜೀವನಕ್ಕೆ ಯಾರೂ ಇಲ್ಲದ ಕಾರಣ ಅವರನ್ನು ಆಶ್ರಯಮಕ್ಕೆ ಸೇರಿಸಲಾಯಿತು.
ಈ ಸಂದರ್ಭದಲ್ಲಿ ಕಬಕ ಗ್ರಾಮ ಪಂಚಾಯತ್ ನ ಪಿಡಿಒ ಆಶಾ ಇ., ಗ್ರಾಮ ಪಂಚಾಯಿತಿ ಸಿಬ್ಬಂದಿ ಯೋಗಿತ, ವಿಕಲಚೇತನ ಪುನರ್ವಸತಿ ಕಾರ್ಯಕರ್ತೆ ಶೀಲಾವತಿ ಸಹಕಾರ ನೀಡಿದರು.