ನವದೆಹಲಿ: ಅಮೆರಿಕದ ಸುಂಕ ಸಮರದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣದಿಂದಾಗಿ ಕೆಲವು ದಿನಗಳಿಂದ ಇಳಿಯುತ್ತಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಮತ್ತೆ ಏರಿಕೆಯಾಗತೊಡಗಿದೆ. ಶುಕ್ರವಾರ ಒಂದೇ ದಿನ 2000 ರೂ. ಏರಿಕೆಯಾಗಿದೆ. ಗುರುವಾರವೂ 2940 ರೂ. ಹೆಚ್ಚಳವಾಗಿತ್ತು. ಇದರಿಂದ ಎರಡೇ ದಿನದಲ್ಲಿ ಚಿನ್ನದ ಬೆಲೆ ಸುಮಾರು 5,000 ರೂ.ಯಷ್ಟು ಏರಿದಂತಾಗಿದೆ. ಬೆಲೆ ಇಳಿಕೆಯಿಂದ ತುಸು ಖುಷಿಯಾಗಿದ್ದ ಚಿನ್ನಪ್ರಿಯರಿಗೆ ಮತ್ತೆ ಬೆಲೆ ಏರಿಕೆಯ ಚಿಂತೆ ಕಾಡಲಾರಂಭಿಸಿದೆ.
ಮುಂಬಯಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,450 ರೂ.ಗೆ ಏರಿಕೆಯಾಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 95,400 ರೂ, ಬೆಲೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 87,450 ರೂ. ಮತ್ತು 24 ಕ್ಯಾರೆಟ್‌ಗೆ 96,280 ರೂ. ಇದೆ. ಬೆಳ್ಳಿಯ ಬೆಲೆಯೂ ಏರುತ್ತಿದೆ.
ಚಿನ್ನದ ಬೆಲೆ ಎರಡು ದಿನದಲ್ಲಿ 5 ಸಾವಿರ ರೂ. ಹೆಚ್ಚಳ
