ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‍ ಹತ್ಯೆಗೆ ಸಂಚು?

ಪ್ರತಿಭಟನೆಗೆ ಕರೆಕೊಟ್ಟ ಆಡಿಯೊದಲ್ಲಿ ಯತ್ನಾಳರನ್ನು ಮುಗಿಸುವ ಕುರಿತು ಮಾತು

ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿರುವ ಬಿಜೆಪಿಯ ಉಚ್ಚಾಟಿತ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ ಹತ್ಯೆಗೆ ಸಂಚು ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನ ಆಡಿಯೊ ತುಣುಕೊಂದು ಬಹಿರಂಗಗೊಂಡಿದ್ದು, ಇದರಲ್ಲಿರುವ ಸಂಭಾಷಣೆ ಹತ್ಯೆ ಸಂಚನ್ನು ಬಯಲುಗೊಳಿಸಿದೆ ಎನ್ನಲಾಗಿದೆ.
ಏ.7ರಂದು ಹುಬ್ಬಳ್ಳಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿರುವ ಮುಸ್ಲಿಂ ಯುವಕನ ಆಡಿಯೊ ವೈರಲ್‌ ಆಗಿದೆ. ಇದು ವಿಜಯಪುರದಲ್ಲಿ ಭಾರಿ ಆತಂಕ ಸೃಷ್ಟಿಸಿದೆ.

ಗೆಳೆಯರೇ.. ನಮಸ್ಕಾರ ಎಲ್ಲ ಸಹೋದರ, ಸಹೋದರಿಯರಿಗೆ ನಮಸ್ಕಾರ. ವಿಜಯಪುರದಲ್ಲಿಂದ ದೊಡ್ಡ ಮೀಟಿಂಗ್‌ ಕರೆಯಲಾಗಿತ್ತು. ನಗರದ ಆಲಂಗೀರ್ ಹಾಲ್‌ನಲ್ಲಿ ಎಂಎಂಸಿ ಮೀಟಿಂಗ್‌ನಲ್ಲಿ ವಿಜಯಪುರದ ಎಲ್ಲ ದಿಗ್ಗಜ ಸದಸ್ಯರು, ಉಲ್ಮಾಗಳು ಅಲ್ಲಿ ಇದ್ರೂ. ಅಲ್ಲಿ ಇದೇ ತಿಂಗಳ ಏ.15ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಇನ್ನು ಯತ್ನಾಳ್‌ಗೆ ಅದು ಫೈನಲ್ ದಿನ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಯತ್ನಾಳ್. ಇದನ್ನ ವಿರೋಧಿಸಿ 1 ಲಕ್ಷ ಜನರು ರ‍್ಯಾಲಿಯಲ್ಲಿ ಸೇರುತ್ತಿದ್ದಾರೆ. ಈ ಬಾರಿ ಎಲ್ಲರೂ ನಿರ್ಧರಿಸಿದ್ದಾರೆ ಅವನದ್ದು ಕೊನೆಯ ದಿನ ಅಂತಾ. ಅವನು ಅರೆಸ್ಟ್ ಆಗಬೇಕು ಇಲ್ಲ, ರ‍್ಯಾಲಿ ಅವನ ಮನೆಗೆ ತೆರಳಬೇಕು, ರ‍್ಯಾಲಿ ಅಲ್ಲಿಂದ ಅವನ ಮನೆಗೆ ನೇರವಾಗಿ ಹೋಗುತ್ತೆ. ಆದ್ದರಿಂದ ಎಲ್ಲ ಸಹೋದರ, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಏ.15ರಂದು ಬೆಳಗ್ಗೆ 10 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಸೇರಬೇಕು, ನಿಮ್ಮ ಅಕ್ಕಪಕ್ಕದ ಊರುಗಳಲ್ಲಿರುವ ಎಲ್ಲ ಸ್ನೇಹಿತರು, ಅಣ್ಣ-ತಮ್ಮಂದಿರಿಗೆ ವಿಷಯ ಹೇಳಿ.































 
 

ಈ ಬಾರಿ ಅವನದ್ದು ಫೈನಲ್ ದಿನ ಇದೆ. ಇಲ್ಲಿವರೆಗೂ ಅವನ ವಿರುದ್ಧ ದೂರು ಕೊಡುತ್ತಿದ್ದೆವು. ಆದ್ರೆ ಏನಾಗುತ್ತಿತ್ತು ಅವನು ಬೇಲ್ ಮೇಲೆ ಹೊರಗಡೆ ಬರ್ತಾ ಇದ್ದ. ಈ ಬಾರಿ ಆ ರೀತಿ ಆಗಲ್ಲ. ಈ ಬಾರಿ ಅವನು ಅರೆಸ್ಟ್ ಆಗಬೇಕು, ಇಲ್ಲ ಅವನ ರುಂಡ ದೇಹದಿಂದ ಇಬ್ಭಾಗ ಆಗಬೇಕು. ಮುಸ್ಲಿಂ ಸದಸ್ಯರು ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಏ.15ರಂದು ಯಾವುದೇ ಕೆಲಸ ಇದ್ದರೂ ರಜೆ ಮಾಡಿ, ಅಂಬೇಡ್ಕರ್ ವೃತ್ತದಲ್ಲಿ ಜಮಾವಣೆ ಆಗಿ. ಇನ್‌ಷಾ ಅಲ್ಲಾ.. ಎಲ್ಲರೂ ಅಲ್ಲೇ ಸಿಗೋಣ ಎಂದು ಆಡಿಯೋನಲ್ಲಿ ಹೇಳಿದ್ದಾನೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top