ಪುತ್ತೂರು : ಪಶ್ಚಿಮ ಕರಾವಳಿಯ ಸುಳ್ಯದ ಯುವ ಸಂಗೀತ ಪ್ರತಿಭೆ ಮಯೂರ್ ಅಂಬೆಕಲ್ಲು ಸಂಗೀತ ನೀಡಿ, ಕಥೆ ಮತ್ತು ಚಿತ್ರಕಥೆಯೊಂದಿಗೆ ದಿಗ್ದರ್ಶಿಸಿದ ಸಿನಿಮಾ ಭಾವ ತೀರ ಯಾನದ 50ನೇ ದಿನದ ಪ್ರದರ್ಶನ ಪುತ್ತೂರಿನ GL ONE ಮಾಲ್ ನಲ್ಲಿ ನಡೆಯಲಿದೆ.
ಇತಿಹಾಸ ನಿರ್ಮಾಣ
ಈಚಿನ ವರ್ಷಗಳ ಇತಿಹಾಸದಲ್ಲಿ ತುಳು ಚಿತ್ರಗಳನ್ನು ಹೊರತುಪಡಿಸಿ ಯಾವುದೇ ಕನ್ನಡ ಸಿನಿಮಾವು ಪುತ್ತೂರಿನಲ್ಲಿ ಸತತ 50 ದಿನಗಳ ಪ್ರದರ್ಶನ ಕಂಡದ್ದಿಲ್ಲ. ಅಂತಹ ಒಂದು ಇತಿಹಾಸ ನಿರ್ಮಾಣದ ಸಂದರ್ಭವೂ ಇದಾಗಿದೆ.
ಪುನರಪಿ ವೀಕ್ಷಣೆ
ಅನೇಕ ಸಿನಿಪ್ರಿಯ ಪ್ರೇಕ್ಷಕರು ಮತ್ತೆ ಮತ್ತೆ ಭಾವ ತೀರ ಯಾನ ಸಿನಿಮಾ ವೀಕ್ಷಣೆಗೆ ಬರುತ್ತಿರುವುದು ವಿಶೇಷವಾಗಿದೆ
ಗಣ್ಯರ ಮತ್ತು ಸಿನಿ ತಾರೆಯರ ಉಪಸ್ಥಿತಿ
ಬೆಳಿಗ್ಗೆ ಗಂಟೆ 11ಕ್ಕೆ ನಡೆಯುವ ಪ್ರದರ್ಶನದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯೊಂದಿಗೆ ತುಳು ಮತ್ತು ಕನ್ನಡ ಸಿನಿ ತಾರೆಯರು ಹಾಜರಿದ್ದು ಸಂದರ್ಭಕ್ಕೆ ಮೆರುಗು ನೀಡಲಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಸಂಭ್ರಮಾಚರಣೆ
ಪುತ್ತೂರಿನಲ್ಲಿ ಸಿನಿಮಾದ ನ್ಯೂಸ್ ಪಾರ್ಟ್ನರ್ ಆಗಿರುವ ನ್ಯೂಸ್ ಪುತ್ತೂರು ಇದರ ಸಹಯೋಗದೊಂದಿಗೆ ಸಂಭ್ರಮಾಚರಣೆಯ ಸಂಕ್ಷಿಪ್ತ ಔಪಚಾರಿಕ ಕಾರ್ಯಕ್ರಮ ನಡೆಯಲಿದೆ.
ಭರದ ಟಿಕೆಟ್ ಬುಕ್ಕಿಂಗ್
ನಾಳಿನ 50ನೇ ಪ್ರದರ್ಶನ . ಏ.11 ಶುಕ್ರವಾರದಂದು ಭಾವ ತೀರ ಯಾನ ಸಿನಿಮಾ ಪ್ರದರ್ಶನಗೊಳ್ಳಲಿದೆ. ಈಗಾಗಲೇ ಸಾಕಷ್ಟು ಟಿಕೆಟ್ ಗಳ ಬುಕ್ಕಿಂಗ್ ಆಗಿದ್ದು, ಬುಕ್ಕಿಂಗ್ ವೇಗವಾಗಿ ನಡೆಯುತ್ತಿದೆ. Book my show Appನಲ್ಲಿಯೂ ಬುಕ್ಕಿಂಗ್ ಮಾಡಬಹುದಾಗಿದೆ.