ಬಂಗಾರ ಖರೀದಿಸುವವರಿಗೆ ಈಗ ಉತ್ತಮ ಅವಕಾಶ
ಬೆಂಗಳೂರು: ಚಿನ್ನ ಖರೀದಿಸುವವರಿಗೆ ಈಗ ಉತ್ತಮ ಅವಕಾಶ. ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 3,450 ರೂಪಾಯಿ ಕಡಿಮೆಯಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಚಿನ್ನದ ಬೆಲೆ ಇಷ್ಟು ಕ್ಷಿಪ್ರವಾಗಿ ಇಳಿಕೆಯಾದದ್ದು ಇದೇ ಮೊದಲು ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸುಂಕ ಸಮರದ ಪರಿಣಾಮವಾಗಿ ಜಗತ್ತಿನ ಷೇರು ಮಾರುಕಟ್ಟೆಗಳೆಲ್ಲ ತಲ್ಲಣಿಸಿ ಹೋಗಿದ್ದು, ಇದರಿಂದಾಗಿ ಚಿನ್ನದ ಬೆಲೆ ಸತತವಾಗಿ ಕುಸಿಯುತ್ತಿದೆ. ಕಳೆದ ಏಳು ದಿನಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,450 ರೂಪಾಯಿ ಇಳಿಕೆಯಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದು ಬಹಳ ಉತ್ತಮ ಅವಕಾಶ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಇಂದು ಸಹ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. Good Returns ವರದಿ ಪ್ರಕಾರ, ಭಾರತದಲ್ಲಿ ಕಳೆದ ಏಳು ದಿನಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,450 ರೂಪಾಯಿ ಇಳಿಕೆಯಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಇದು ಸುವರ್ಣವಕಾಶವಾಗಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 82,240 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂ: 89,720 ರೂಪಾಯಿ ಇದೆ.
ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
ಒಂದು ಕೆಜಿ ಬೆಳ್ಳಿ ಬೆಲೆ 93,900 ರೂಪಾಯಿ ಇದೆ.